ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಮಧ್ಯೆ ದುಃಖದ ಘಟನೆ ನಡೆದಿದೆ. ಪಟಾಕಿ ಸಿಡಿದು ಐವರ ಮಕ್ಕಳ ಕಣ್ಣಿಗೆ ಗಾಯವಾಗಿದ್ದು, ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
Advertisement
ವೈದ್ಯರ ಪ್ರಕಾರ, ಗಾಯಗೊಂಡ ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇವರಲ್ಲಿ ಇಬ್ಬರು ಸ್ವತಃ ಪಟಾಕಿ ಹಚ್ಚುವ ವೇಳೆ ಗಾಯಗೊಂಡರೆ, ಮೂವರು ಹಚ್ಚಿದ ಪಟಾಕಿ ನೋಡುವಾಗ ಪೆಟ್ಟಾಗಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆ ಮತ್ತು ನಾರಾಯಣ ನೇತ್ರಾಲಯಗಳಲ್ಲಿ ಗಾಯಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಡಾ. ಶಶಿಧರ್ ಅವರ ಪ್ರಕಾರ, ಪಟಾಕಿ ಹೊಡೆಯುವಾಗ ಸೂಕ್ತ ಎಚ್ಚರಿಕೆ ವಹಿಸದೇ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ.