ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿಗೊಂಡಿದೆ.
ಮುಂದಿನ ತಿಂಗಳು ನವೆಂಬರ್ 17 ಮತ್ತು 18 ರಂದು ಎರಡು ದಿನಗಳ ಕಾಲ ಪರಿಷೆ ನಡೆಯಲಿದೆ. ಪ್ರತಿ ವರ್ಷದಂತೆ, ಶ್ರೀ ದೊಡ್ಡಗಣಪತಿ ದೇವಾಲಯ ಬಳಿ ನಡೆಯುವ ಈ ಪರಿಷೆಗೆ ವಿಶೇಷ ಇತಿಹಾಸವಿದೆ. ಈ ವರ್ಷವೂ ಯಾವುದೇ ಅಹಿತಕರ ಘಟನೆ ಇಲ್ಲದೆ, ಶ್ರದ್ಧೆ-ಸಂಭ್ರಮದಿಂದ ಆಯೋಜಿಸಲು ನಿರ್ಧಾರವಾಗಿದೆ.
ಇದೇ ಗುರುವಾರ, ಪರಿಷೆಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸ್ಥಳೀಯ ಶಾಸಕರು, ವ್ಯಾಪಾರಿಗಳು ಭಾಗವಹಿಸುತ್ತಾರೆ. ಕಾರ್ಯಕ್ರಮದ ವೇಳೆ ಯಾವುದೇ ಸುಂಕ ವಸೂಲಾತಿ ನಡೆಯಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಮತ್ತು ಪರಿಷೆಯ ವಿಶೇಷತೆಗಳನ್ನು ಬಹಿರಂಗಪಡಿಸಲಿದ್ದಾರೆ.



