ಮೈಸೂರು:- ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬುಧವಾರ ರಾತ್ರಿ ಆರು ತಿಂಗಳ ಗಂಡು ಮಗುವನ್ನು ಕದ್ದ ಮಹಿಳೆ ಬಂಧಿಸುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
Advertisement
ಹಾಸನ ಮೂಲದ 50 ವರ್ಷದ ನಂದಿನಿ ಬಂಧಿತ ಮಹಿಳೆ. ಮಗುವನ್ನು ತಕ್ಷಣ ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಮಗುವಿನ ಪೋಷಕರು ಪ್ಲಾಟ್‌ಫಾರ್ಮ್‌ನಲ್ಲಿ ನಿದ್ದೆಯಲ್ಲಿ ಇದ್ದಾಗ, ಮಹಿಳೆ ಮಗು ಅನ್ನು ಕದ್ದೊಯ್ದಳು. ತಾಯಿ ಎಚ್ಚರಗೊಂಡಾಗ ಮಗು ಕಾಣೆಯಾಗಿರುವುದು ತಿಳಿದು, ರೈಲ್ವೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸಿಸಿಟಿವಿ ಕ್ಯಾಮೆರಾ ಪರಿಶೀಲನೆಯ ಮೂಲಕ ಮಹಿಳೆ ಮಗುವನ್ನು ಅಪಹರಿಸಿದ್ದಾಳೆ ಎಂದು ದೃಢಪಟ್ಟಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.