ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರಾಣ ಇರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ಕಿತ್ತೂರು ಚೆನ್ನಮ್ಮ. ಇವರ ಆದರ್ಶಗಳನ್ನು ಮಕ್ಕಳು ಪಾಲಿಸಬೇಕು ಎಂದು ಶಿಕ್ಷಕಿ ಎಸ್.ಎಂ. ಜಿಡ್ಡಿಮನಿ ಹೇಳಿದರು.
ಅವರು ಸಮೀಪದ ಕಣವಿ ಗ್ರಾಮದ ಕೆ.ಜಿ.ವಿ.ಎಸ್ ಪ್ರಾಥಮಿಕ ಶಾಲೆಯಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕಿತ್ತೂರು ಚೆನ್ನಮ್ಮ ಸ್ವಾತಂತ್ರದ ಕಿಚ್ಚು ಹಚ್ಚುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಾಗಿದ್ದು, ನೆಲ, ಜಲ, ಭಾಷೆಗಳ ಉಳಿವಿಗಾಗಿ ಶ್ರಮಿಸಿದವರು. ಇಂತಹ ಮಹನೀಯರ ಜೀವನ ಚರಿತ್ರೆ ನಮಗೆಲ್ಲರಿಗೂ ದಾರಿ ದೀಪವಾಗಿವೆ ಎಂದರು.
ಈ ಸಂದರ್ಭದಲ್ಲಿ ಎನ್.ಎಸ್. ಆಲೂರ, ಜಯಪ್ರಕಾಶ ಬಡಿಗೇರ, ಎಸ್.ವಾಯ್. ಕೊಪ್ಪದ, ಐ.ಎಸ್. ಹಿರೇಮಠ, ಟಿ.ಎನ್. ಲಿಂಗರಾಜ, ಎ.ಎನ್. ಸುಲಾಖೆ, ಎಂ.ಬಿ. ಬಂಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.



