ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ವಲಯ ಅರಣ್ಯಾಧಿಕಾರಿಗಳ ಕಚೇರಿ, ಗದಗ ಮೃಗಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಕೋಟಿ ಇವರ ಸಂಯುಕ್ತಾಶ್ರಯದಲ್ಲಿ ಗದಗ ಮೃಗಾಲಯದ ಎಲ್ಲ ಅಧಿಕಾರಿಗಳು/ಸಿಬ್ಬಂದಿಗಳಿಗೆ ರೇಬಿಸ್ ಪ್ರಿ ಎಕ್ಸ್ಪೋಸರ್ ಪ್ರೋಫೈಲ್ಯಾಕ್ಸಿಸ್ ಲಸಿಕೆಯನ್ನು ನೀಡಲಾಯಿತು.
ರೇಬಿಸ್ ಪ್ರಿ ಎಕ್ಸ್ಪೋಸರ್ ಪ್ರೋಫೈಲ್ಯಾಕ್ಸಿಸ್ ಲಸಿಕೆಯನ್ನು ಹೆಚ್ಚಿನ ಅಪಾಯದ ಗುಂಪುಗಳಾದ ವನ್ಯಜೀವಿ ವಾರ್ಡನ್ಗಳು, ಕ್ವಾರಂಟೈನ್ ಅಧಿಕಾರಿಗಳು, ಪಶು ವೈದ್ಯರು, ಪ್ರಾಣಿ ನಿರ್ವಾಹಕರು, ನಾಯಿ ಹಿಡಿಯುವವರು, ಸೋಂಕಿತ ವಸ್ತುಗಳನ್ನು ನಿರ್ವಹಿಸುವ ಪ್ರಯೋಗಾಲಯದ ಸಿಬ್ಬಂದಿಗಳು, ಮಾನವ ರೇಬಿಸ್ ಪ್ರಕರಣ ಗಳನ್ನು ನೋಡಿಕೊಳ್ಳುವ ವೈದ್ಯರು, ಸಿಬ್ಬಂದಿಗಳು ಹಾಗೂ ರೇಬಿಸ್ ಎಂಡಮಿಕ್ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಮುಖ್ಯವಾಗಿ ನೀಡಬಹುದಾಗಿದೆ.
ಮೃಗಾಲಯದ ಅಧಿಕಾರಿಗಳು/ಸಿಬ್ಬಂದಿಗಳಿಗೆ ಪ್ರಾಣಿಗಳ ನಿರಂತರ ಸಂಪರ್ಕ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ರೇಬಿಸ್ ಪ್ರಿ ಎಕ್ಸ್ಪೋಸರ್ ಪ್ರೋಫೈಲ್ಯಾಕ್ಸಿಸ್ ಲಸಿಕೆಯನ್ನು ನೀಡಲಾಯಿತು. ಲಸಿಕೆಯನ್ನು 0, 7, 21 ಅಥವಾ 28ನೇ ದಿನ 0.1 ಮಿಲಿ ಲೀಟರ್ (1 ಸೈಟ್) ನೀಡಬಹುದಾಗಿದೆ. ರೋಗ ನಿರೋಧಕ ಶಕ್ತಿ ಕುಂಠಿತ ಗೊಂಡ ವ್ಯಕ್ತಿಗಳಲ್ಲಿ ಒಂದು ಪೂರ್ತಿ ಲಸಿಕೆಯನ್ನು 0, 7, 21 ಅಥವಾ 28ನೇ ದಿನ ಕೊಡಬಹುದು (1 ಸೈಟ್).
ಈ ಸಂದರ್ಭದಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ, ಗದಗ ಮೃಗಾಲಯದ ಅಧಿಕಾರಿ ಸಂತೋಷ ಕೆಂಚಪ್ಪನವರ, ಸ್ನೇಹಾ ಕೊಪ್ಪಳ, ಪಶು ವೈದ್ಯಾಧಿಕಾರಿ ಡಾ. ಪವಿತ್ರಾ, ಹುಲಕೋಟಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಐಶ್ವರ್ಯ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ಮತ್ತು ಪ್ರಾ.ಆ. ಕೇಂದ್ರ ಹುಲಕೋಟಿಯ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ರೇಖಾ ನಾಗರಹಳ್ಳಿ ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಎಸ್.ಪಿ. ಕಳಸಣ್ಣವರ ಚುಚ್ಚುಮದ್ದು ನೀಡಿದರು.



