ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕಲಾ ವಿಕಾಸ ಪರಿಷತ್‌ನ ರಜತ ಸಂಭ್ರಮವನ್ನು ವರ್ಷ ಪೂರ್ತಿ ಆಚರಿಸಲು ಯೋಜಿಸಿದ್ದು, ನ. 2ರಂದು ಸಂಜೆ 4 ಗಂಟೆಗೆ ಗದುಗಿನ ಮುಂಡರಗಿ ರಸ್ತೆಯಲ್ಲಿರುವ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಚಿಕ್ಕಟ್ಟಿ ಸಭಾ ಭವನದಲ್ಲಿ ಕಲಾ ವಿಕಾಸ ಪರಿಷತ್ ರಜತ ಮಹೋತ್ಸವ ವರ್ಷಾಚರಣೆ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್.ವೈ. ಚಿಕ್ಕಟ್ಟಿ ವಹಿಸಿಕೊಳ್ಳುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಚಂದ್ರಶೇಖರ ವಸ್ತಾದ, ರಾಜು ಗುಡಿಮನಿ, ಡಾ. ಅನಂತ ಶಿವಪುರ, ವಿ.ಕೆ. ಗುರುಮಠ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಾ. ಜಿ.ಬಿ. ಪಾಟೀಲ, ಪ್ರೊ. ಅನ್ನದಾನಿ ಹಿರೇಮಠ, ಬಸವರಾಜ ಗಣಪ್ಪನವರ, ಪ್ರೊ. ಕೆ.ಹೆಚ್. ಬೇಲೂರು, ರವಿ ಎಲ್. ಗುಂಜಿಕರ, ಅಂದಾನೆಪ್ಪ ವಿಭೂತಿ ಆಗಮಿಸಲಿದ್ದಾರೆ.
ವರ್ಷಾಚರಣೆಯ ಮೊದಲ ಕಾರ್ಯಕ್ರಮದಲ್ಲಿ ಕೋಲ್ಕತ್ತಾದ ರಿಂಪಾ ಸಿವ ಇವರ ತಬಲಾ ಸೋಲೋ, ಬೆಂಗಳೂರಿನ ಮಲ್ಲೇಶ ಹೂಗಾರ ಇವರ ಶಾಸ್ತ್ರೀಯ ಗಾಯನ, ಭವ್ಯ ಎಸ್. ಕತ್ತಿ ಕಲಾವೈಭವ ಭರತನಾಟ್ಯ ತಂಡ ಲಕ್ಷ್ಮೇಶ್ವರ ಇವರ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಸತೀಶ ಕೊಳ್ಳಿ ಲೆಹರಾದಲ್ಲಿ, ರಾಮು ಕೊಡೇಕಲ್ ಹಾರ್ಮೋನಿಯಂ ಸಾಥ್, ಕನ್ನಯ್ಯ ಕೊಡೇಕಲ್ ತಬಲಾ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಹೋಗಿ-ಬರಲು ಗಾಂಧಿ ಸರ್ಕಲ್, ಕನ್ನಡ ಸಾಹಿತ್ಯ ಪರಿಷತ್‌ನ ತೋಂಟದ ಸಿದ್ಧಲಿಂಗ ಕನ್ನಡಭವನ ಮತ್ತು ವೀರೇಶ್ವರ ಪುಣ್ಯಾಶ್ರಮದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉಚಿತ ಗೌರವ ಪಾಸ್ ನೀಡಲಾಗುತ್ತಿದ್ದು, ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ಇರುವುದರಿಂದ 9886717732 ಸಂಪರ್ಕಿಸಿ ಪಾಸ್ ಪಡೆದುಕೊಳ್ಳಲು ಸಂಘಟಕರು ವಿನಂತಿಸಿಕೊಂಡಿದ್ದಾರೆ.


