ಮೈಸೂರು:- ಬೈಕ್ ಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದ ಘಟನೆ ಮೈಸೂರು-ನಂಜನಗೂಡು ರಸ್ತೆಯ ಚಾಮುಂಡಿ ಟೌನ್ ಶಿಪ್ ಬಳಿ ಜರುಗಿದೆ.
Advertisement
ಮೃತರನ್ನು ಸಿದ್ದಾರ್ಥ(15), ತಂದೆ ಶಿವಮೂರ್ತಿ(52) ಹಾಗೂ 46 ವರ್ಷದ ತಾಯಿ ಎಂದು ಗುರುತಿಸಲಾಗಿದೆ.
ಬೈಕ್ ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ ನಂಜನಗೂಡಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಗೆ KSRTC ಬಸ್ ಚಾಲಕನ ಅಜಾಗರೂಕ ಚಾಲನೆ ಎಂದು ತಿಳಿದು ಬಂದಿದೆ.
ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


