ಕುಖ್ಯಾತ ನಟೋರಿಯಸ್ ಕಳ್ಳನ ಹೆಡೆಮುರಿ ಕಟ್ಟಿದ ವಿದ್ಯಾರಣ್ಯಪುರ ಪೊಲೀಸ್!

0
Spread the love

ಬೆಂಗಳೂರು:- ಎರಡು ದಶಕಗಳಿಂದ ಕಳ್ಳತನವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಅಸ್ಲಾಂ ಪಾಷಾ ಎಂದು ಗುರುತಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಮನೆ ಕಳ್ಳತನ ನಡೆಸಿದ್ದ ಅಸ್ಲಾಂ, ಕದ್ದ ಹಣದ ಒಂದು ಭಾಗವನ್ನು ಅಜ್ಮೀರ್ ದರ್ಗಾಗೆ ಕಾಣಿಕೆ ನೀಡುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಕಳ್ಳತನದ ನಂತರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಗೋವಾಕ್ಕೆ ತೆರಳಿ ಆನಂದಿಸುತ್ತಿದ್ದನೆಂದು ಹೇಳಲಾಗಿದೆ.

ಸಧ್ಯ ಅಸ್ಲಾಂ ಬಂಧಿಸಿರುವ ಪೊಲೀಸರು, ಸುಮಾರು 22.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈ ಬಂಧನದ ಮೂಲಕ ಹಲವು ಪೆಂಡಿಂಗ್ ಕೇಸ್‌ಗಳನ್ನು ಪೊಲೀಸರು ಬಗೆಹರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here