ಬೆಂಗಳೂರಿಗರ ಗಮನಕ್ಕೆ: ಈ ರಸ್ತೆಗಳಲ್ಲಿ ಇಂದು ಸಂಚಾರ ಬದಲಾವಣೆ – ಕಂಪ್ಲೀಟ್ ವಿವರ ಇಲ್ಲಿದೆ!

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಸಂಚಾರದಲ್ಲಿ ಬದಲಾವಣೆ ಇರಲಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಬೊಮ್ಮನಹಳ್ಳಿ ಮುಸ್ಲಿಂ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಯಿಂದ ಮೆರವಣಿಗೆಯು ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಸಾಗಲಿರುವ ಕಾರಣ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್, ರೂಪೇನ ಅಗ್ರಹಾರ, ಗಾರೇಭಾವಿಪಾಳ್ಯ ಜಂಕ್ಷನ್ ಮೂಲಕ ಬೆಂಗಳೂರು ನಗರದಿಂದ ಹೊರ ಹೋಗುವ ಮತ್ತು ಬೆಂಗಳೂರು ನಗರಕ್ಕೆ ಪ್ರವೇಶಿಸುವ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಧ್ಯಾಹ್ನ 3 ಗಂಟೆಯ ನಂತರ ಹೊಸೂರು ರಸ್ತೆ ಬೊಮ್ಮನಹಳ್ಳಿ ಜಂಕ್ಷನ್ ಮೂಲಕ ಸಂಚರಿಸುವ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ.

ಪರ್ಯಾಯ ಮಾರ್ಗ:
ವಿಲ್ಸನ್‌ಗಾರ್ಡನ್, ಆಡುಗೋಡಿ, ಕಡೆಯಿಂದ ಬರುವ ವಾಹನಗಳು ಡೈರಿ ಸರ್ಕಲ್ ಮೂಲಕ ಬನ್ನೇರುಘಟ್ಟ ರಸ್ತೆಗೆ ಸಾಗಿ ಅಲ್ಲಿಂದ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಸಂಚರಿಸಬಹುದು.

ಬನಶಂಕರಿಯಿಂದ ಕಡೆಯಿಂದ ಡಬಲ್ ಡೆಕ್ಕರ್ ಮೂಲಕ ಬರುವ ವಾಹನಗಳು ಜಯದೇವ ಜಂಕ್ಷನ್‌ನಲ್ಲಿ ಬಲ ತಿರುವುದು ಕಡೆದು ಬನ್ನೇರುಘಟ್ಟ ರಸ್ತೆ ಮೂಲಕ ಸಾಗಿ ನೈಸ್ ರೋಡ್ ಮೂಲಕ ಹೊಸೂರು ರಸ್ತೆಗೆ ಸಂಚಾರ.

ಹೊರವರ್ತುಲ ರಸ್ತೆ ಮಾರತಹಳ್ಳಿ ಕಡೆಯಿಂದ ಬರುವ ವಾಹನಗಳು 27ನೇ ಮುಖ್ಯರಸ್ತೆ ಎಡ ತಿರುವು ಪಡೆದು ವೇಮನ ಜಂಕ್ಷನ್ ಮೂಲಕ ಸೋಮಸುಂದರ್‌ಪಾಳ್ಯ ಮಾರ್ಗವಾಗಿ ಕೂಡ್ಲುಗೆ ತೆರಳಿ ಹೊಸೂರು ಮುಖ್ಯ ರಸ್ತೆ
ಹೊಸೂರು ಕಡೆಯಿಂದ ಬೆಂಗಳೂರು ನಗರಕ್ಕೆ ಬರುವ ವಾಹನಗಳು ಎಲೆಕ್ಟ್ರಾನಿಕ್‌ಸಿಟಿ ಎಲಿವೇಟೆಡ್ ಪ್ರೈಓವರ್ ಮೂಲಕ ಸಂಚರಿಸಬಹುದು.


Spread the love

LEAVE A REPLY

Please enter your comment!
Please enter your name here