ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ರಹಮತನಗರದ ಹತ್ತಿರವಿರುವ ನವನಗರ ಸ್ಲಂ ಪ್ರದೇಶ ರಿ.ಸ.ನಂ: 594ರಲ್ಲಿ ಸುಮಾರು 78 ಬಡ ಕೂಲಿ ಕಾರ್ಮಿಕ ಕುಟುಂಬಗಳು ಭೂ ಮಾಲೀಕರಿಂದ ನಿವೇಶನಗಳನ್ನು ಖರೀದಿ ಮಾಡಿದ್ದಾರೆ. ಈಗ ಸ್ಥಳೀಯ ಕುಟುಂಬಗಳು ಸರ್ಕಾರದ ವಿವಿಧ ಯೋಜನೆಗಳಲ್ಲಿ ಮನೆಗಳನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಭೂ ಮಾಲೀಕ ಇಲ್ಲಿಯ ಕುಟುಂಬಗಳಿಗೆ ನಿವೇಶನಗಳನ್ನು ಬಿಟ್ಟುಕೊಡದೇ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನ. 11ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ತಿಳಿಸಿದರು.
ನವನಗರ ಸ್ಲಂ ಪ್ರದೇಶದಲ್ಲಿ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ಸುಮಾರು 25 ವರ್ಷಗಳಿಂದ ನವನಗರ ಪ್ರದೇಶದ ಜನರು ತಮ್ಮ ನಿವೇಶನಗಳನ್ನು ಬಿಟ್ಟುಕೊಡಬೇಕೆಂದು ಭೂ ಮಾಲೀಕನಿಗೆ ಹೇಳುತ್ತಾ ಬಂದಿದ್ದರೂ, ಬಡವರ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಪದೇ-ಪದೇ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ ಎಂದರು.
ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನ್‌ಬಾನು ಹವಾಲ್ದಾರ, ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ಸೈಯದ ಅಲ್ತಾಫ್ ರಾಣೆಬೆನ್ನೂರ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮೌಲಾಸಾಬ ಗಚ್ಚಿ, ಬಸವರಾಜ ಕಳಸದ, ಶೇಖಪ್ಪ ಶೆಗಣಿ, ಮೆಹಬೂಬ ಮುಲ್ಲಾ, ಗೌಸಸಾಬ ಅಕ್ಕಿ, ರಿಜ್ವಾನ ಮುಲ್ಲಾ, ರಫೀಕ ಬರದೂರು, ನಾರಾಯಣ ಅಂಜಿಖಾನೆ, ಖಾಜಾಸಾಬ ಉಮಚಗಿ, ಯಾಸೀನ ನದಾಫ್, ಮೋಮಿನ ಶೇಖ್, ಕಸ್ತೂರಿ ಹಳ್ಳಿ, ಮೆಹಬೂಬ ಹುಯಿಲಗೋಳ, ದಾದಾಪೀರ ನರಗುಂದ, ಜಂದಿಸಾಬ ಢಾಲಾಯತ್, ಅಶೋಕ ಗುಮಾಸ್ತೆ, ಹಜರತ್ ಅಲಿ ಹಾವೇರಿ, ಗೌಸ ಉಮಚಗಿ, ಖಾಜಾಸಾಬ ಗಬ್ಬೂರು ಮುಂತಾದವರಿದ್ದರು.
ಮೋಹನ ಭಜಂತ್ರಿ ವಕೀಲರು ಮಾತನಾಡಿ, ನವನಗರ ಪ್ರದೇಶದಲ್ಲಿ ನೂರಾರು ಬಡ ಕುಟುಂಬಗಳು ತಮ್ಮ ಸ್ವಂತ ಮನೆಯ ಕನಸು ಕಾಣುತ್ತ, ಚಿಕ್ಕ ಮನೆಗಳಲ್ಲಿ ಜೀವನ ನಡೆಸುತ್ತ ಬಂದಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಭೂ ಮಾಲೀಕನಿಂದ ಆಗಿನ ಮಾರುಕಟ್ಟೆ ಬೆಲೆ ನೀಡಿ ನಿವೇಶನಗಳನ್ನು ಖರೀದಿ ಮಾಡಿದ್ದಾರೆ. ಈಗ ಸುಮಾರು 3 ವರ್ಷಗಳಿಂದ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ಭೂ ಮಾಲೀಕ ದಬ್ಬಾಳಿಕೆ ನಡೆಸುತ್ತಿದ್ದು, ಇದನ್ನು ಖಂಡಿಸಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ ಭೂ ಮಾಲೀಕನ ದೌರ್ಜನ್ಯವನ್ನು ಖಂಡಿಸಬೇಕೆಂದು ಹೇಳಿದರು.


