ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಆರೋಪ: ಹೆರಿಗೆ ವೇಳೆ ಮಗು ದುರ್ಮರಣ

0
Spread the love

ಕೋಲಾರ:- ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಸಾವನ್ನಪ್ಪಿದ ಘಟನೆ ಜರುಗಿದೆ.

Advertisement

ಕೆಜಿಎಫ್ ತಾಲೂಕು ಕೋಡಿಹಳ್ಳಿ ಗ್ರಾಮದ ರೂಪ ಎಂಬವರ ಮಗು ಸಾವನ್ನಪ್ಪಿದೆ. ಶುಕ್ರವಾರ ಹೆರಿಗೆಗೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ವೇಳೆ ವೈದ್ಯರ ನಿರ್ಲ್ಯಕ್ಷ ಆರೋಪ ಕೇಳಿಬಂದಿದೆ. ನಾರ್ಮಲ್ ಡೆಲಿವರಿ ಮಾಡಿಸುವುದಾಗಿ ಹೇಳಿ ಕರೆಸಿಕೊಂಡು ನಿರ್ಲ್ಯಕ್ಷದಿಂದ ಮಗುವನ್ನ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ನಾಗಮಣಿ ಹಾಗೂ ನರ್ಸ್ ರಿತಿಕಾ ವಿರುದ್ಧ ಈ ಆರೋಪ ಮಾಡಲಾಗುತ್ತಿದ್ದು, ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಾಯಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ದಾರೆ. ಅಷ್ಟೊತ್ತಿಗೆ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಇನ್ನೂ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಸ್ಪತ್ರೆ ಎದುರು ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲದೆ ರೂಪ ಪತಿ ಬಾಬು ವೈದ್ಯಾಧಿಕಾರಿ ಸುನಿಲ್‌ಗೆ ದೂರು ನೀಡಿದ್ದು, ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here