ಬೆಂಗಳೂರು| ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದ ಪೊಲೀಸ್!

0
Spread the love

ಬೆಂಗಳೂರು:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಸ್ಮಶಾನದ ಬಳಿ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಜರುಗಿದೆ.

Advertisement

ಗುಂಡೇಟು ತಿಂದ ಆರೋಪಿಯನ್ನು ರವಿ ಪ್ರಸಾದ್ ರೆಡ್ಡಿ ಎಂದು ಗುರುತಿಸಲಾಗಿದೆ. ಹೆಬ್ಬಗೋಡಿ ಇನ್ಸ್ಪೆಕ್ಟರ್ ಸೋಮಶೇಖರ್ ಅವರಿಂದ ಫೈರಿಂಗ್ ನಡೆದಿದೆ. ಜಿಗಣಿ ರಿಂಗ್ ರೋಡ್ ನಲ್ಲಿ ಬಾಲಪ್ಪ ರೆಡ್ಡಿ ಎಂಬವರನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಾಗ ತಮಿಳುನಾಡಿನ ಶಾನಮಾವು ಕಾಡಿನಲ್ಲಿ ಬಾಲಪ್ಪ ರೆಡ್ಡಿ ಅವರನ್ನು ಕತ್ತು ಸೀಳಿ ಸಾಯಿಸಿ ಮೃತ ದೇಹವನ್ನು ಕಾಡಿನಲ್ಲಿ ಎಸೆದು ರವಿ ಪರಾರಿಯಾಗಿದ್ದ. ಇದಕ್ಕೂ ಮೊದಲು ಮಾದೇಶ ಎಂಬವರನ್ನು ರವಿ ಕೊಲೆ ಮಾಡಿದ್ದ.

ಟೆಕ್ನಿಕಲ್ ದಾಖಲೆ ಆಧಾರಿಸಿ ಆರೋಪಿ ರವಿಯನ್ನು ಬಂಧಿಸಲಾಗಿತ್ತು. ಸ್ಥಳ ಮಹಜರು ಮಾಡುವ ವೇಳೆ ಆರೋಪಿ ಕಾನ್‌ಸ್ಟೇಬಲ್‌ ಮೇಲೆ ದಾಳಿ ನಡೆಸಿದ್ದಾನೆ. ದಾಳಿ ನಿಲ್ಲಿಸದೇ ಇದ್ದಾಗ ಇನ್ಸ್ಪೆಕ್ಟರ್ ಸೋಮಶೇಖರ್‌ ಅವರು ಎರಡು ಕಾಲಿಗೆ ಗುಂಡು ಹೊಡೆದು ಅವನನ್ನು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here