ಮತ್ತೆ ಇಂಜುರಿ: ಕಂಬ್ಯಾಕ್ ಕನಸಿನಲ್ಲಿದ್ದ ಪಂತ್​ಗೆ ಆಘಾತ..!

0
Spread the love

ಟೀಮ್​ ಇಂಡಿಯಾ ವಿಕೆಟ್​ ಕೀಪರ್​, ಸ್ಟಾರ್ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಮತ್ತೆ ಇಂಜುರಿಗೆ ತುತ್ತಾಗಿದ್ದು, ಕಂಬ್ಯಾಕ್ ಕನಸಿನಲ್ಲಿದ್ದ ಅವರಿಗೆ ಆಘಾತ ಎದುರಾಗಿದೆ.

Advertisement

ಸೌತ್​ ಆಫ್ರಿಕಾ ಎ ವಿರುದ್ಧದ 2ನೇ ಅನಧಿಕೃತ ಟೆಸ್ಟ್​ನಲ್ಲಿ ಬ್ಯಾಟಿಂಗ್​ ವೇಳೆ ಪಂತ್​​ ಇಂಜುರಿಗೆ ತುತ್ತಾಗಿದ್ದಾರೆ. ಬ್ಯಾಟಿಂಗ್​ ವೇಳೆ ಬಾಲ್​ ಕೈಗೆ ಬಡಿದಿದ್ದು, ನೋವಲ್ಲಿ ನರಳಾಡಿದ ಪಂತ್​ ಕೂಡಲೇ ಮೈದಾನ ತೊರೆದಿದ್ದಾರೆ. ನವೆಂಬರ್​ 14ರಿಂದ ಆರಂಭವಾಗೋ ಸೌತ್​ ಆಫ್ರಿಕಾ ವಿರುದ್ಧ ಟೆಸ್ಟ್​ ಪಂದ್ಯಕ್ಕೂ ಮುನ್ನ ಪಂತ್​ ಇಂಜುರಿಗೆ ತುತ್ತಾಗಿರೋದು ಟೀಮ್​ ಇಂಡಿಯಾದಲ್ಲಿ ಆತಂಕ ಮೂಡಿಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಇಂಜುರಿಗೆ ತುತ್ತಾಗಿ ಫೀಲ್ಡ್​ನಿಂದ ದೂರ ಉಳಿದಿದ್ದ ರಿಷಬ್​ ಪಂತ್​ ಕಮ್​ಬ್ಯಾಕ್​ ಮಾಡಿದ್ದಾರೆ. ಕಮ್​ಬ್ಯಾಕ್ ಮಾಡಿರುವ ಪಂತ್​​ಗೆ​ ಉಪನಾಯಕತ್ವ ನೀಡಲಾಗಿದೆ. ವಿಂಡೀಸ್​ ಸರಣಿಯಲ್ಲಿ ಪಂತ್ ಅಲಭ್ಯತೆಯಲ್ಲಿ ​ಜವಾಬ್ದಾರಿಯನ್ನು ಜಡೇಜಾಗೆ ನೀಡಲಾಗಿತ್ತು. ಪಂತ್​ ಎಂಟ್ರಿಯಿಂದ ಎನ್​.ಜಗದೀಶನ್​ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಗಾಯ ಹಿನ್ನೆಲೆಯಲ್ಲಿ ಅವರು ಆಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.


Spread the love

LEAVE A REPLY

Please enter your comment!
Please enter your name here