‘ವಂದೇ ಮಾತರಂ’ ಗೀತೆಯನ್ನು ಪಕ್ಷಾತೀತವಾಗಿ ಗೌರವಿಸಿ: ಶಾಸಕ ಸಿ.ಸಿ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಬಿಜೆಪಿ ವತಿಯಿಂದ ಬಂಗಾಳಿ ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಗರದ ತೋಂಟದಾರ್ಯ ಮಠದ ಎದುರು ಸಂಭ್ರಮಾಚರಣೆಯನ್ನು ಆಯೋಜಿಸಲಾಯಿತು.

Advertisement

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಬಂಗಾಳಿ ಕವಿ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ ವಂದೇ ಮಾತರಂ ಗೀತೆಯನ್ನು ದೇಶದ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಹಾಡಿ ಗೌರವಿಸಬೇಕು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಈ ಗೀತೆ ಅಪಾರ ಪ್ರಭಾವ ಬೀರಿ ದೇಶಾದ್ಯಂತ ದೇಶಪ್ರೇಮದ ಚೈತನ್ಯವನ್ನು ಉಂಟುಮಾಡಿತ್ತು ಎಂದು ಸ್ಮರಿಸಿದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಈ ಅಮರ ಗೀತೆಯ 150ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಭಾರತ ಸರ್ಕಾರವು ನವೆಂಬರ್ 7ರಿಂದ ಒಂದು ವರ್ಷದವರೆಗೆ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ವಿ.ಪ. ಸದಸ್ಯ ಎಸ್.ಎಚ್. ಸಂಕನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಪಕ್ಕಿರೇಶ ರಟ್ಟಿಹಳ್ಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಮುಖಂಡರಾದ ಬಿ.ಎಚ್. ಲದ್ವಾ, ತೋಟಸಾ ಭಾಂಡಗೆ, ನಾಗರಾಜ ಕುಲಕರ್ಣಿ, ಜಗನ್ನಾಥಸಾ ಭಾಂಡಗೆ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ವಿಜಯಕುಮಾರ ಗಡ್ಡಿ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನವೀನ್ ಕೊಟೆಕಲ್, ಮಂಜುನಾಥ ಶಾಂತಗೇರಿ, ಶಂಕರ ಕಾಕಿ, ಸಂಜೀಕುಮಾರ ಖಟವಟೆ, ಪ್ರಶಾಂತ ನಾಯ್ಕರ, ಶಿವು ಹಿರೇಮನಿಪಾಟೀಲ, ಉಷಾ ದಾಸರ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಶಶಿಧರ ದಿಂಡೂರ, ವಿನಾಯಕ ಮಾನ್ವಿ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ಅಶೋಕ ನವಲಗುಂಡ, ಶ್ರೀಪತಿ ಉಡುಪಿ ಸೇರಿದಂತೆ ಮಹಿಳಾ ಮೋರ್ಚಾ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂದಗಾಮಿ ಮತ್ತು ಉಗ್ರಗಾಮಿಗಳಿಗೆ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ ಆಗಿತ್ತು. ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಭ್ರಮಾಚರಣೆಯ ಮೂಲಕ ಗೌರವ ಸಲ್ಲಿಸುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here