ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಭಕ್ತ ಕನಕದಾಸರ 539ನೇ ಜಯಂತ್ಯೋತ್ಸವ ಆಯೋಜಿಸಲಾಗಿತ್ತು.
ಕನಕದಾಸರು ಕ್ರಿ.ಶ. 1487ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದರು. ಅವರ ಮೂಲ ಹೆಸರು ತಿಮ್ಮಪ್ಪ ನಾಯಕ. ಅವರು ಬಾಲ್ಯದಲ್ಲಿಯೇ ತರ್ಕ, ವ್ಯಾಕರಣ ಮತ್ತು ಮೀಮಾಂಸೆಯಲ್ಲಿ ಪರಿಣತಿ ಸಾಧಿಸಿದರು. ಯುದ್ಧದಲ್ಲಿ ಗಾಯಗೊಂಡ ನಂತರ ಭಗವಾನ್ ಹರಿಯನ್ನು ಧ್ಯಾನಿಸಲು ಪ್ರಾರಂಭಿಸಿದರು. ಇದರಿಂದ ಸ್ಫೂರ್ತಿಗೊಂಡು, ಕನಕದಾಸರು ಹರಿಯ ಭಜನೆ ಮತ್ತು ಸಾಹಿತ್ಯ ರಚನೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಇಂತಹ ದಾಸರ ಜಯಂತ್ಯೋತ್ಸವ ಆಚರಣೆ ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಯ್ಯ ಬಾಳಿಹಳ್ಳಿಮಠ, ಪ್ರಧಾನ ಗುರುಗಳಾದ ಹಾಲೇಶ ಎಸ್. ಜಕ್ಕಲಿ, ಶಿಕ್ಷಕರಾದ ನೆಮೇಶ ಎನ್. ಯಾರಗುಪ್ಪಿ, ವಿದ್ಯಾರ್ಥಿಗಳು ಇದ್ದರು.


