- ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಹಗ್ಗಜಗ್ಗಾಟ
ವಿಜಯಸಾಕ್ಷಿ ಸುದ್ದಿ, ಬೀದರ್
ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು, ಶಾಸಕರ ಮಧ್ಯೆ ವಾಗ್ವಾದ ನಡೆದ ಘಟನೆ ಬೀದರ್ ನಲ್ಲಿ ಜರುಗಿದೆ.
ನಗರದ ಹೊರವಲಯದ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಆದರೆ, ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂ ಖಾನ್, ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ ವಿರೋಧ ವ್ಯಕ್ತಪಡಿಸಿದರು.
ವಿಷಯಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಜಾಣ ಹಾಗೂ ಶಾಸಕರ ಮಧ್ಯೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸಚಿವ ಪ್ರಭು ಚೌವಾಣ ಮತ್ತು ಈಶ್ವರ ಖಂಡ್ರೆ ಮಧ್ಯೆ ವಾಗ್ವಾದ ಜೋರಾಗಿತ್ತು.

ಮಧ್ಯೆ ಪ್ರವೇಶ ಮಾಡಿದ ಶಾಸಕ ರಹಿಮ್ ಖಾನ್ ಜಿಲ್ಲಾ ಸಂಕೀರ್ಣ ಇಲ್ಲಿಯೇ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಬೀದರ್ ಬಂದ್ ಗೆ ಕರೆ ಕೊಡುತ್ತೇನೆ ಎಂದು ಸಚಿವರಿಗೆ ಧಮಕಿ ಹಾಕಿದ್ದರು. ಸಚಿವರು ಮಾತ್ರ ರೇಷ್ಮೆ ಕಚೇರಿ ಆವರಣದಲ್ಲಿ ಜಿಲ್ಲಾ ಸಂಕೀರ್ಣ ಮಾಡಲಾಗುವುದು ಎಂದು ಹೇಳಿದ್ದರಿಂದ ಸಭೆಯಲ್ಲಿ ಮತ್ತಷ್ಟು ವಾಗ್ವಾದ ಸೃಷ್ಟಿಯಾಯಿತು.