ಕೆಂಪು ಕೋಟೆ ಬಳಿ ಕಾರು ಸ್ಪೋಟ ಕೇಸ್: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಕರ್ನಾಟಕದಲ್ಲೂ ಹೈಅಲರ್ಟ್ ಘೋಷಣೆ!

0
Spread the love

ನವದೆಹಲಿ/ ಬೆಂಗಳೂರು:- ನವದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಪೋಟ ಕೇಸ್ ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ.

Advertisement

ದೆಹಲಿಯಲ್ಲಿ ಕಾರು ಸ್ಫೋಟ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಏರ್​ಪೋರ್ಟ್, ಬಂದರು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರ್ಕೆಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ, ಜಿಲ್ಲೆಗಳಲ್ಲಿ ನಿಗಾವಹಿಸುವಂತೆ ಎಸ್​ಪಿಗಳಿಗೆ ಡಿಜಿ&ಐಜಿಪಿ ಆದೇಶಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಕಮಿಷನರ್​​​ ಸೂಚಿಸಿದ್ದಾರೆ. ಕೂಡಲೇ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಬೇಕು. ಲಾಡ್ಜ್​ಗಳನ್ನು ತಪಾಸಣೆ ಮಾಡಿ, ಲಾಡ್ಜ್‌ನಲ್ಲಿ ತಂಗಿರುವ ಹೊರ ರಾಜ್ಯದವರ ವಿಚಾರಣೆ ಮಾಡಬೇಕು. ರಾತ್ರಿ ವೇಳೆ ಗಸ್ತು ಹೆಚ್ಚಳ ಮಾಡುವಂತೆ ಡಿಸಿಪಿ, ಎಸಿಪಿ, ಇನ್ಸ್​ಪೆಕ್ಟರ್​ಗಳಿಗೆ ಬೆಂಗಳೂರು ನಗರ ಪೊಲೀಸ್​ ಕಮಿಷನರ್​​ ಸೀಮಂತ್​ ಕುಮಾರ್ ಸಿಂಗ್​​ ಸೂಚನೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here