ಬೆಂಗಳೂರು: 28 ವರ್ಷದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯೂಟ್ಯೂಬರ್ V2 ಸೂರ್ಯ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
Advertisement
ಆರೋಪಿ ಸೂರ್ಯ ಅವರು ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆ ಮಾಡಿದ್ದಲ್ಲದೆ, ಫೋನ್ ಹಾಗೂ ಸ್ಮಾರ್ಟ್ ವಾಚ್ ಒಡೆದು ಹಾಕಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಬಂಡಿಮಹಾಕಾಳಿ ದೇವಾಲಯದ ಬಳಿ ಪರಿಚಯವಾಗಿದ್ದ ಸೂರ್ಯ, ನಂತರ ಸಂತ್ರಸ್ತೆಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ ಕಿರುಕುಳ ನೀಡಿದ್ದಾರೆಂದು ದೂರುದಾರೆ ತಿಳಿಸಿದ್ದಾರೆ.
ಕಳೆದ ತಿಂಗಳು ಈ ವಿಷಯದ ಬಗ್ಗೆ ಮಾತುಕತೆಗೆ ತನ್ನ ಮನೆಗೆ ಕರೆಸಿಕೊಂಡಾಗ, ಸೂರ್ಯ ಅವರು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.


