ಬೆಂಗಳೂರು:- ಇಂದಿರಾ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ತೌಫೀಕ್ ಪಾಷಾ, ಶೇಖ್ ಗೌಸ್ ಬಂಧಿತ ಆರೋಪಿಗಳು. ಬಂಧಿತರು, ಕೆಜಿ ಹಳ್ಳಿಯಲ್ಲಿ ವಾಸವಿದ್ದರು. ರಾತ್ರಿ ಹೊತ್ತು ರಸ್ತೆ ಬದಿ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಅದರಂತೆ ಕಳೆದ ಏಪ್ರಿಲ್ ತಿಂಗಳಲ್ಲಿ ಕೆಟಿ ರೋಡಲ್ಲಿ ಬೈಕ್ ಕಳ್ಳತನ ಮಾಡಿದ್ದರು.
ಈ ಸಂಬಂಧ ಬೈಕ್ ಮಾಲೀಕರು ಇಂದಿರಾ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೋಲೀಸರು, ಇದೀಗ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ತೌಫೀಕ್ ಪಾಷಾ ಮೇಲೆ ಈ ಹಿಂದೆ 12 ಕೇಸ್ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳಿಂದ 24 ಲಕ್ಷ ಮೌಲ್ಯದ 20 ಬೈಕ್, 2 ಬ್ಯಾಟರಿ ವಶಕ್ಕೆ ಪಡೆಯಲಾಗಿದೆ.
ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


