ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಆಚರಿಸಲಾಯಿತು.
Advertisement
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿರೂಪಾಕ್ಷ ಕಟ್ಟಿಮನಿ, ಒಬ್ಬ ಸಾಮಾನ್ಯ ಮಹಿಳೆ ತನ್ನ ರಾಜ್ಯವನ್ನು ಹೇಗೆ ಕಾಪಾಡಬಹುದು ಎಂಬುದನ್ನು ತೋರಿಸಿಕೊಟ್ಟ ವೀರನಾರಿ, ಒನಕೆ ಓಬವ್ವಳು ಹೈದರಾಲಿ ಸೈನಿಕರನ್ನು ಒನಕೆಯಿಂದ ಹೊಡೆದುರುಳಿಸಿ ಸಾಹಸ ಮೆರೆದವಳು ಎಂದರು.
ಕಾರ್ಯಕ್ರಮದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ್, ಶಶಿಧರ ಕುಂಬಾರ, ಜಗದಂಬಾ ಕೋಪರ್ಡೆ, ಸುಮನಾ ಯು, ನವೀನಕುಮಾರ ತಿಪ್ಪಾ, ಜಿ. ಹನುಮನಗೌಡರ, ದಯಾನಂದ ಪಾಟೀಲ, ಎಮ್.ಎಮ್. ಶಂಕರಪ್ಪ ಮತ್ತು ಕೇಂದ್ರ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು.


