ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಆಹಾರ ಪ್ರಾಧಿಕಾರದಿಂದ ಬೀದಿ ವ್ಯಾಪಾರಿಗಳಿಗೆ ನ. 14ರವರೆಗೆ ಗದಗ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಗದಗ ಎಫ್ಎಸ್ಎಸ್ಎಐ ಅಧಿಕಾರಿಗಳ ಸಹಯೋಗದೊಂದಿಗೆ ಉಚಿತವಾಗಿ ಫುಡ್ ಲೈಸೆನ್ಸ್ ಮಾಡಲಾಗುತ್ತಿದೆ.
Advertisement
ಹಣ್ಣು-ತರಕಾರಿ, ಫಾಸ್ಟ್ಫುಡ್, ಗೋಬಿ ಮಂಚೂರಿ, ಚಿಕನ್ ಕಬಾಬ್, ಎಗ್ರೈಸ್ ಸೇರಿದಂತೆ ಬೀದಿ ವ್ಯಾಪಾರಿಗಳಿಗಾಗಿ ಸರ್ಕಾರ ಉಚಿತ ಸೌಲಭ್ಯ, 10 ಲಕ್ಷ ರೂಪಾಯಿವರೆಗಿನ ಲೈಸೆನ್ಸ್ ಪರವಾನಿಗೆ ನೀಡುತ್ತಿದ್ದು, ಬೀದಿ ವ್ಯಾಪಾರಿಗಳು ಗದಗ ನಗರದ ತಿಲಕ್ ಪಾರ್ಕ್ ಹತ್ತಿರವಿರುವ ನಗರಸಭೆ ಕಾಂಪ್ಲೆಕ್ಸ್ನಲ್ಲಿನ ಸಂಘದ ಕಾರ್ಯಾಲಯದಲ್ಲಿ ಉಚಿತ ಅರ್ಜಿ ಹಾಕಲು 2 ಫೋಟೋ, ಆಧಾರ್ ಕಾರ್ಡ್ ಝೆರಾಕ್ಸ್ ತರಬೇಕು ಎಂದು ಸಂಘದ ಅಧ್ಯಕ್ಷ ಮಕ್ತುಮಸಾಬ ನಾಲಬಂದ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


