ರಾಜ್ಯ ಸರ್ಕಾರ ಕ್ರಿಮಿನಲ್‌ಗಳನ್ನು ಘೋಷಿಸುತ್ತಿದೆ: ಸಂತೋಷ ಅಕ್ಕಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಒದಗಿಸುವ ಮೂಲಕ ರಾಜ್ಯ ಸರ್ಕಾರ ಕ್ರಿಮಿನಲ್‌ಗಳನ್ನು ಘೋಷಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ಸಿಎಂ ಸಿದ್ಧರಾಮಯ್ಯ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಕೈದಿಗಳಿಗೆ ರಾಜಾತಿಥ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಕ್ರಿಮಿನಲ್‌ಗಳನ್ನು ಘೋಷಿಸುವ ಕೆಲಸ ಮಾಡುತ್ತಿರುವ ಬಗ್ಗೆ ರಾಜ್ಯದ ಜನತೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ ಎಂದರು.

ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಅಪರಾಧಿಕ ಮನಸ್ಸಿನಿಂದ ಹೊರಬರಲು ಶಿಕ್ಷೆಗೆ ಒಳಗಾದ ಕೈದಿಗಳಿಗೆ ಜೈಲುಗಳಲ್ಲೇ ರಾಜಾಶ್ರಯ ನೀಡುವ ಮೂಲಕ ರಾಜ್ಯ ಸರ್ಕಾರ ಭಯೋತ್ಪಾದಕರು, ಕ್ರಿಮಿನಲ್‌ಗಳು, ಅತ್ಯಾಚಾರಿಗಳು, ವಂಚಕರಿಗೆ ನಿರ್ಭೀತಿಯಿಂದ ಮೊಬೈಲ್, ಮದ್ಯ, ಗಾಂಜಾ, ಸಿಗರೇಟ್ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ದೊರಕಿಸಿಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಭಯೋತ್ಪಾದಕನಿಗೆ ಮೊಬೈಲ್ ನೀಡಿರುವುದು ದೇಶಕ್ಕೆ ಗಂಡಾಂತರ ತರುವ ಕೃತ್ಯವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಲು ಎನ್‌ಐಎಗೆ ವಹಿಸಬೇಕು ಎಂದು ಈ ಮೂಲಕ ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾ ಘಟಕ ಆಗ್ರಹಿಸಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಆರ್.ಕೆ. ಚವ್ಹಾಣ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಪ್ರಮುಖರಾದ ಅನಿಲ ಅಬ್ಬಿಗೇರಿ, ಶಶಿಧರ ದಿಂಡೂರ, ಅಮರನಾಥ ಗಡಗಿ, ಎಫ್.ಎಸ್. ಗೋಡಿ, ಮಂಜುನಾಥ ಶಾಂತಗೇರಿ, ಸುರೇಶ ಚಿತ್ತರಗಿ, ಶಂಕರ ಕಾಕಿ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿ ಕತ್ತಿ, ಕಿರಣ ಕಲಾಲ, ಸಂತೋಷ ಜಾವೂರ, ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷ ಅರವಿಂದ ಅಣ್ಣಿಗೇರಿ, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ ದಿಂಡೂರ, ವಿದ್ಯಾವತಿ ಗಡಗಿ, ಯುವ ಮೋರ್ಚಾ ರೋಣ ಮಂಡಲ ಅಧ್ಯಕ್ಷ ಹುಲ್ಲಪ್ಪ ಕೆಂಗಾರ, ಯುವ ಮೋರ್ಚಾ ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ನರೆಗಲ್, ವೀರೇಶಪ್ರಭು ಗದಗಿನ, ವಿನಾಯಕ ಹೊರಕೇರಿ, ಕಾರ್ತಿಕ ಶಿಗ್ಲಿಮಠ, ರಜತ್ ಬಿಮ್ಕರ್, ಸಾಗರ ಪಾಪನಾಳ, ಮಂಜುನಾಥ, ಕಿರಣ ಕಟ್ಟಿ, ನವೀನ ಕುರ್ತಕೋಟಿ, ಸುರೇಶ ಚವ್ಹಾಣ, ಅಕ್ಷಯ ರೇವಣಕರ, ಕಿರಣ ದಾಟನಾಳ, ಹಾಲೇಶ, ಮಲ್ಲಿಕಾರ್ಜುನ ಕಳಸಾಪೂರ, ಮಂಜುನಾಥ, ವಿನೋದ ಹಂಸನೂರ ಮುಂತಾದವರಿದ್ದರು.

ಯುವ ಮೋರ್ಚಾ ಗದಗ ನಗರ ಮಂಡಲ ಅಧ್ಯಕ್ಷ ನವೀನ ಕೊಟೆಕಲ್ ಮಾತನಾಡಿ, ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಸೇರಿದ ತರುಣ್ ಎನ್ನುವ ಆರೋಪಿಗೂ ಸಹ ರೆಸಾರ್ಟ್ ಸೌಲಭ್ಯ ನೀಡಿರುವುದನ್ನು ಗಮನಿಸಿದರೆ ಗೃಹ ಸಚಿವರು ನಿದ್ದೆ ಮಾಡುತ್ತಿದ್ದಾರೋ ಅಥವಾ ಅವರೇ ಈ ಎಲ್ಲ ವ್ಯವಸ್ಥೆಗಳಿಗಾಗಿ ಜೈಲಿನ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೋ ಎನ್ನುವ ಅನುಮಾನಗಳು ಜನತೆಯನ್ನು ಕಾಡುತ್ತಿವೆ. ಈ ಕೃತ್ಯವನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ. ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.


Spread the love

LEAVE A REPLY

Please enter your comment!
Please enter your name here