ಕಾರವಾರ:- ಡಿಸ್ಕೌಂಟ್ ಆಫರ್ ಆಮಿಷವೊಡ್ಡಿ 300 ಜನರಿಗೆ ಹಣ ವಂಚನೆ ಎಸಗಿದ ಆರೋಪದಡಿ ಮೂವರನ್ನು ಅರೆಸ್ಟ್ ಮಾಡಲಾಗಿದೆ.
Advertisement
ಎಂ.ಗಣೇಶನ್ (52), ತ್ಯಾಗರಾಜನ್ (65), ಮೈಯನಾದನ್ (42) ಬಂಧಿತರು. ಇವರು ತಮಿಳುನಾಡು ಮೂಲದವರು ಎನ್ನಲಾಗಿದೆ. ಭಟ್ಕಳದ ಮಹ್ಮದ್ ಸವೂದ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಶಹರ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.
ಭಟ್ಕಳ ನಗರದಲ್ಲಿ ಗ್ಲೋಬಲ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಮಳಿಗೆ ತೆರೆದು 10% ರಿಂದ 40% ಡಿಸ್ಕೌಂಟ್ ನೀಡುವುದಾಗಿ ಹೇಳಿ, 300 ಜನರಿಂದ 20 ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.


