ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೊಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಹರೀಶ ಕಳಸೂರ 100 ಮೀ, 200 ಮೀ ಓಟದಲ್ಲಿ ಪ್ರಥಮ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ, ರಾಧಾ ಗಾಂಜಿ 800 ಮೀ, 1500 ಮೀ ಓಟ ಮತ್ತು 4/100 ಮೀ ರಿಲೇ ಪ್ರಥಮ, ಅನಿತಾ ಭಜಂತ್ರಿ 400 ಮೀ ದ್ವಿತೀಯ, ಮೇಘಾ ಲಮಾಣಿ, ಪ್ರಿಯಾಂಕ ವಿರಕ್ತಮಠ, ಮಧುಮತಿ ಮಾಗಡಿ, ಸಹನಾ ಕಮ್ಮಾರ ಇವರುಗಳು 4/400 ಮೀ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಎಂ.ಎ. ತುಂಬರಮಟ್ಟಿ ಸೇರಿ ಶಾಲೆಯ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.



