ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಸೊರಟೂರ ಅವಿರೋಧ ಆಯ್ಕೆಯಾಗಿದ್ದಾರೆ. ಪರಮೇಶ ಲಮಾಣಿ ಕಾರ್ಯದರ್ಶಿ, ಸೋಮಣ್ಣ ಯತ್ನಳ್ಳಿ ಮತ್ತು ಶಿವಲಿಂಗಯ್ಯ ಹೊತ್ತಗಿಮಠ (ಉಪಾಧ್ಯಕ್ಷರು), ನಾಗರಾಜ ಹಣಗಿ (ಖಜಾಂಚಿ), ರಮೇಶ ನಾಡಿಗೇರ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನ ಕಳಸಾಪುರ, ದಿಗಂಬರ ಪೂಜಾರ, ಕರಿಯಪ್ಪ ಶಿರಹಟ್ಟ, ಮಂಜುನಾಥ ರಾಠೋಡ ಇದ್ದರು.



