ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ದೊರೆತ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದಿಂದು ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement

ದೇಶಾದ್ಯಂತ ಮತಗಟ್ಟೆತನ ನಡೆದಿದೆ ಎಂಬ ಸುಳ್ಳು ಸುದ್ದಿ ಹರಡಿಸುವ ಮೂಲಕ ಅಪಪ್ರಚಾರದ ಅಭಿಯಾನ ಕೈಗೊಂಡ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ರಾಹುಲ್ ಗಾಂಧಿಗೆ ಬಿಹಾರ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಶಿವಾನಂದ ಮಠದ ಹೇಳಿದರು.

ಬಾಲಾಜಿರಾವ್ ಬೊಸ್ಲೆ ಮಾತನಾಡಿ, ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಎನ್‌ಡಿಎ ಮೈತ್ರಿಗೆ 200ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದೊರೆತಿದ್ದು ಮೋದಿ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷವೇ ದೊಡ್ಡ ಕಳ್ಳರ ಪಾರ್ಟಿಯಾಗಿದೆ. ತನ್ನ ತಪ್ಪನ್ನು ಮುಚ್ಚಿ ಹಾಕಲು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ರಾಹುಲ್ ಗಾಂಧಿ ಮಾಡಿದ್ದರಿಂದ ಬಿಹಾರದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎಂದರು.

ಈ ಸಂದರ್ಭದಲ್ಲಿ ಉಮೇಶ ಮಲ್ಲಾಪುರ, ಕರಣ್ ಬಂಡಿ, ರಾಜೇಂದ್ರ ಘೋರ್ಪಡೆ, ಮುದಿಯಪ್ಪ ಕರಡಿ, ಡಿ.ಜಿ. ಕಟ್ಟಿಮನಿ, ಪರಸಪ್ಪ ಪೂಜಾರ, ಪರಶುರಾಮ ಗುಡದೂರ, ಆರ್.ಕೆ. ಚವ್ಹಾಣ, ಮುತ್ತಯ್ಯ ಕರಡಿಮಠ, ಅಂದಪ್ಪ ಅಂಗಡಿ, ಶಿವಕುಮಾರ ಜಾಧವ್, ಮಹಾಂತೇಶ ಪೂಜಾರ, ಹನಮಂತ ಹಟ್ಟಿಮನಿ, ದೇವರಾಜ ವರಗಾ, ಅಶೋಕ ಮಾದರ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here