ಬೆಂಗಳೂರು ಗ್ರಾಮಾಂತರ:- ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಎಂಎಲ್ಎ, ಎಂಎಲ್ಸಿ ಆದವರಿಗೆ ಅಧಿಕಾರಕ್ಕೆ ಆಸೆಪಡುವ ಹಕ್ಕಿದೆ. ಪಕ್ಷಕ್ಕಾಗಿ ದುಡಿದವರು ಸಹಜವಾಗಿ ಸಚಿವ ಸ್ಥಾನಕ್ಕಾಗಿ ನಿರೀಕ್ಷೆಯಿಡುತ್ತಾರೆ, ಅದನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಹಲವು ಸಂದರ್ಭಗಳಲ್ಲಿ ಯಾವ ಪೂರ್ವಸೂಚನೆಯೂ ಇಲ್ಲದೆ ರಾತ್ರಿ ಹೇಳಿ ಬೆಳಗ್ಗೆ ಸಚಿವರನ್ನಾಗಿ ಮಾಡಿದ ಉದಾಹರಣೆಗಳೂ ಇವೆ. ಪಕ್ಷಕ್ಕಾಗಿ ಹೋರಾಟ, ತ್ಯಾಗ, ಶ್ರಮ ಮಾಡಿದವರ ಆಸೆಗಳನ್ನು ಗೌರವಿಸುವುದು ಸಹಜ ಎಂದರು. ಅಲ್ಲದೇ ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಮಾತನಾಡಿ, ಯಾರಾದ್ರು ಗಿಣಿ ಶಾಸ್ರ್ತ ಇದ್ದರೆ ಕೇಳಿ ಅವರತ್ರ ಮಾತಾಡಿ ಎಂದು ಡಿಕೆಶಿ ಪಂಚ್ ಕೊಟ್ಟಿದ್ದಾರೆ.



