ಗದಗ: ಗದಗ ನಗರದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ವತಿಯಿಂದ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ 9 ಅಗ್ನಿಕುಂಡಗಳ ಅತಿರುದ್ರ ಮಹಾಯಜ್ಞ ಕಿರಿಯ ಕುಂಭಮೇಳಕ್ಕೆ ಹೊಸಹಳ್ಳಿಯ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ಹಾಗೂ ಸುಕ್ಷೇತ್ರ ಬಳಗಾನೂರಿನ ಪೂಜ್ಯಶ್ರೀ ಶಿವಶಾಂತವೀರ ಶರಣರು ನಾಗಾಸಾಧು ಪೂಜ್ಯಶ್ರೀ ಸಹದೇವಾನಂದ ಗುರುಜಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಲಿಂಗರಾಜ ಗುಡಿಮನಿ, ಫಕ್ಕೀರಸಾ ಬಾಂಡಗೆ ಮುಂತಾದವರು ಉಪಸ್ಥಿತರಿದ್ದರು.



