ಯಶ್ ಅಮ್ಮ ಪುಷ್ಪಾ ಅರುಣ್ಕುಮಾರ್ ಅವರು ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಪುಷ್ಪ ಅರುಣ್ ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ ಪ್ರಮೋಟ್ ಮಾಡಲು ಹಣ ಪಡೆದು ಡೀ ಪ್ರಮೋಟ್ ಮಾಡಿದ ಆರೋಪವನ್ನು ಮಾಡಿ ದೂರು ದಾಖಲಿಸಿದ್ದಾರೆ.
ಕೊತ್ತಲವಾಡಿ ಸಿನಿಮಾ ಪ್ರಮೋಟ್ ಮಾಡಲು ಹಣ ಪಡೆದು ಕೆಲವರು ಡಿ-ಪ್ರಮೋಟ್ ಮಾಡಿದ್ದಾರೆ ಎಂದು ಪುಷ್ಪ ಅವರು ಬೆಂಗಳೂರಿನ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯಶ್ ತಾಯಿ ಪುಷ್ಪ ಅವರು ಹರೀಶ್ ಅರಸು, ಮನು, ನಿತಿನ್, ಮಹೇಶ್ ಗುರು, ಸ್ವರ್ಣ ಲತಾ ಎಂಬುವವರ ಮೇಲೆ FIR ದಾಖಲು ಮಾಡಿದ್ದಾರೆ. ಕೊತ್ತಲವಾಡಿ ಸಿನಿಮಾ ಪ್ರಮೋಶನ್ ಹಿನ್ನೆಲೆಯಲ್ಲಿ ಈ ಮೇಲಿನ ವ್ಯಕ್ತಿಗಳು ತಮ್ಮಿಂದ ಒಟ್ಟು 64 ಲಕ್ಷ ರೂಪಾಯಿ ಹಣ ಪಡೆದು ಡಿಪ್ರಮೋಟ್ ಮಾಡಿರುವ ಆರೋಪವನ್ನು ಪುಷ್ಪ ಅವರು ಮಾಡಿದ್ದಾರೆ. ಇತ್ತೀಚೆಗೆ ಬೆದರಿಕೆ ಕರೆಗಳು ಬರುತ್ತಿರೋದಾಗಿ ದೂರು ದಾಖಲಿಸಿರುವ ಯಶ್ ತಾಯಿ ಪುಷ್ಪಾ ಅವರು ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಈಗಾಗಲೇ 64 ಲಕ್ಷ ಹಣ ಪಡೆದುಕೊಂಡು ಸಿನಿಮಾವನ್ನು ಪ್ರಮೋಟ್ ಮಾಡದೇ ಇರುವುದೂ ಅಲ್ಲದೇ, ಡಿ ಪ್ರಮೋಟ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದಾರೆ. ಹೆಚ್ಚಿನ ಹಣ ಕೊಡದೆ ಇದ್ದಲ್ಲಿ ಮನೆ ಬಳಿ ಬಂದು ಗಲಾಟೆ ಮಾಡೋದಾಗಿ ಅವರೆಲ್ಲಾ ಬೆದರಿಸುತ್ತಿದ್ದಾರೆ ಎಂದು ಪುಷ್ಪಾ ಅಟರುಣ್ಕುಮಾರ್ ಅವರು ಆರೋಪ ಮಾಡಿ, ಇದೀಗ ಪ್ರಕರಣ ದಾಖಲಿಸಿದ್ದಾರೆ.
ಪುಷ್ಪಾ ಅವರು ದೂರು ಕೊಟ್ಟ ಬಳಿಕ ಹೈ ಗ್ರೌಂಡ್ ಪೊಲೀಸರು ಆ ಆರೋಪಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಮೊದಲು ಕೂಡ ಕೊತ್ತಲವಾಡಿ ಸಿನಿಮಾಗೆ ಸಂಬಂಧಪಟ್ಟಂತೆ ‘ಪೇಮೆಂಟ್ ಇಶ್ಯೂ’ ಸಾಕಷ್ಟು ಸುದ್ದಿ ಮಾಡಿತ್ತು. ಕೊತ್ತಲವಾಡಿ ಸಿನಿಮಾ ತಂಡದಿಂದ ತಮಗೆ ಸಂಭಾವನೆ ಬಂದಿಲ್ಲ ಅಂದು ಕೆಲವರು ಆರೋಪಿಸಿ, ಮಾಧ್ಯಮಗಳ ಮುಂದೆ ಬಂದು ಮಾತನ್ನಾಡಿದ್ದರು.


