ಬೆಂಗಳೂರು:- ನಗರದಲ್ಲಿ ಹಾಳಾದ ರಸ್ತೆ ಗುಂಡಿ ಅವಾಂತರ ಮುಂದುವರಿದಿದೆ. ರಸ್ತೆಯ ಗುಂಡಿ ಯಿಂದ ಬೈಕ್ ಅಪಘಾತ ಸಂಭವಿಸಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.
Advertisement
ಗೋಕಾಕ್ ಮೂಲದ ಶಾಂತಮ್ಮ(46) ಮೃತ ಮಹಿಳೆ. ಗೋಕಾಕ್ ಮೂಲದ 46 ವರ್ಷದ ಶಾಂತಮ್ಮ, ಮಗನ ಜೊತೆ ವಾಸವಾಗಿದ್ದವರು, ಸಂಜೆ 3.30 ಗಂಟೆಗೆ ಸ್ನೇಹಿತೆ ಜೊತೆ ಬೈಕ್‌ನಲ್ಲಿ ಸಾಗುತ್ತಿರುವಾಗ ಹುಳಿಮಾವು ಸರಸ್ವತಿಪುರಂ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದರು.
ರಸ್ತೆ ಹಾಳಾಗಿರುವುದರಿಂದ ಬೈಕ್ ನಿಯಂತ್ರಣ ತಪ್ಪಿದ್ದು, ಕೂಡಲೇ ರಸ್ತೆ ಮೇಲೆ ಬಿದ್ದ ಮಹಿಳೆ ಮೇಲೆ ಟಿಪ್ಪರ್ ಹರಿದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳೀಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.


