ಶೈಕ್ಷಣಿಕ ಅಭಿವೃದ್ಧಿಗೆ ಅಂಗನವಾಡಿ ಪೂರಕ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಂಗನವಾಡಿ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಬಸವರಾಜ ಹಾರೋಗೇರಿ ಹೇಳಿದರು.

Advertisement

ಅವರು ಪಟ್ಟಣದ ವಾರ್ಡ್ ನಂ. 11 ಮತ್ತು 12ರ ಅಂಗನವಾಡಿ ಸಂಖ್ಯೆ 141ರಲ್ಲಿ ಅಂಗನವಾಡಿಯ 50ನೇ ವರ್ಷದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲ ಪಾಠಶಾಲೆ ಮನೆಯಾದರೆ, ನಂತರದ ಪೂರ್ವ ಪ್ರಾಥಮಿಕ ಶಾಲೆ ಅಂಗನವಾಡಿಯಾಗಿದೆ. ಇಂದು ಅಂಗನವಾಡಿ ಕೇಂದ್ರದಲ್ಲಿ ಸರಕಾರದ ಸಾಕಷ್ಟು ಸೌಲಭ್ಯಗಳಿದ್ದು, ಈಗ ಅಂಗನವಾಡಿಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪಾಲಕರು ಮಕ್ಕಳನ್ನು ತಪ್ಪದೇ ಅಂಗನವಾಡಿಗಳಿಗೆ ಕಳಿಸಬೇಕು. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಬೀಬಿಜಾನ್ ಶೇಖ, ಶೋಭಾ ದಿವಟರ, ಸುಧಾ ವಡ್ನಕೊಪ್ಪ, ಗಂಗಮ್ಮಾ ಹೊರಪೇಟಿ, ಶ್ರೀದೇವಿ ದಿವಟರ, ರಾಜೇಶ್ವರಿ ಸಂಗನಪೇಟಿ, ದಾವಲಬಿ ಶೇಖ, ರವಿ ಹೊರಪೇಟಿ, ಪಾತೀಮಾ ಶೇಖ, ಋಕ್ಷಾನಾ ಕಿಂಡ್ರಿ, ಅಂಗನವಾಡಿ ಶಿಕ್ಷಕಿ ಸವಿತಾ ಮಾಡಳ್ಳಿ, ಕಾರ್ಯಕರ್ತೆ ನೀಲವ್ವ ಖಾನಾಪೂರ ಇದ್ದರು.


Spread the love

LEAVE A REPLY

Please enter your comment!
Please enter your name here