ಸ್ಯಾಂಡಲ್ವುಡ್ ನಟಿ ಮತ್ತು ಆರೋಪಿ ರನ್ಯಾರಾವ್ ಸಂಬಂಧಿಸಿದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ತನಿಖೆ ಅಂತಿಮ ಹಂತಕ್ಕೆ ತಲುಪಿದೆ. ಕಳೆದ ಆರು ತಿಂಗಳಿಂದ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದ ಡಿಆರ್ಐ ಇಂದು ಸುಮಾರು 4,000 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ತನಿಖೆಯ ವೇಳೆ ಒಟ್ಟಾರೆ 123 ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ ಎಂಬ ಸಂಗತಿ ಸ್ಪಷ್ಟವಾಗಿದೆ.
ತನಿಖೆಯಲ್ಲಿಯೇ ರನ್ಯಾರಾವ್ ಒಬ್ಬರೇ 104 ಕೋಟಿ ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಾಟ ಮಾಡಿದ್ದಾರೆ ಎನ್ನುವುದು ಬಹಿರಂಗವಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿತ್ತು. ಉಳಿದ ನಾಲ್ವರಿಗೆ ಪ್ರತ್ಯೇಕ ನೋಟೀಸುಗಳನ್ನೂ ಜಾರಿ ಮಾಡಲಾಗಿದೆ.
ಚಾರ್ಜ್ಶೀಟ್ನಲ್ಲಿ ರನ್ಯಾರಾವ್ ತಂದೆ ರಾಮಚಂದ್ರರಾವ್ ಅವರ ಕಾರಿನ ದುರ್ಬಳಕೆ, ಕೆಲವು ರಾಜಕಾರಣಿಗಳ ಹೆಸರನ್ನು ಬಳಸಿಕೊಂಡಿರುವ ಆರೋಪ, ಎಲ್ಲ ವಿವರಗಳೂ ಸಮಗ್ರವಾಗಿ ದಾಖಲಿಸಲಾಗಿದೆ. ಈಗ ದೋಷಾರೋಪ ಪಟ್ಟಿ ಸಲ್ಲಿಕೆಯಿಂದ ಪ್ರಕರಣ ಇನ್ನಷ್ಟು ಗಂಭೀರ ಹಂತಕ್ಕೆ ಪ್ರವೇಶಿಸಿದೆ.


