ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ದಿನಾಂಕ 25-11-2025ರಿಂದ 10-12-2025ರವರೆಗೆ ಅವಕಾಶ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಡಾ. ಅಮರೇಶ ನಾಶಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಿನಾಂಕ 06-11-2022ರ ಪೂರ್ವದಲ್ಲಿ ಪದವಿ ಪಡೆದವರು ಮಾತ್ರ ಅರ್ಹರಾಗಿದ್ದು, ನಮೂನೆ 18ನ್ನು ಭರ್ತಿ ಮಾಡಿ ನಿಗದಿಪಡಿಸಿದ ಕಾರ್ಯಾಲಯಗಳಲ್ಲಿ ಸಲ್ಲಿಸಬಹುದು. ಮೂರು ವರ್ಷಗಳ ಅಂಕಪಟ್ಟಿ, ಘಟಿಕೋತ್ಸವ ಪ್ರಮಾಣಪತ್ರ, ಪಾಸಾದ ಪ್ರಮಾಣಪತ್ರ, ಡಿಪ್ಲೋಮಾ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತದಾರರ ಚೀಟಿ, ಪಾಸ್ಪೋರ್ಟ್ ಅಳತೆಯ (ಬಿಳಿ ಬಣ್ಣದ ಹಿನ್ನೆಲೆಯ) ಭಾವಚಿತ್ರದ ಪ್ರತಿಗಳನ್ನು ಗಜೆಟೆಡ್ ಅಧಿಕಾರಿಗಳಿಂದ ಅಥವಾ ನೋಟರಿಯವರಿಂದ ದೃಢಿಕರಿಸಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಗಳ ಪದವೀಧರರು ನೋಂದಣಿ ಮಾಡಲು ಅವಧಿ ವಿಸ್ತರಿಸಲಾಗಿದೆ ಎಂದು ಡಾ. ಅಮರೇಶ ನಾಶಿ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ–9886752869 ಸಂಪರ್ಕಿಸಲು ಕೋರಿದ್ದಾರೆ.



