ಬೆಂಗಳೂರು:- ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ಬೆಳವಣಿಗೆ ನಡೆಯಲಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಜತಮಹೋತ್ಸವದ ಅಂಗವಾಗಿ ಇಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿ ಎದುರು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದ ಸಾಲ ಸದ್ಯ 7.5 ಲಕ್ಷ ರೂಪಾಯಿ ಇದೆ. ಇದ್ರಲ್ಲಿ 5.5 ಲಕ್ಷ ಕೋಟಿ ಸಾಲ ಸಿದ್ದರಾಮಯ್ಯನವರೇ ನಾಡಿನ ಮೇಲೆ ಹೊರಿಸಿದ್ದಾರೆ. ರಾಜ್ಯದ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಿದ್ದಾರೆ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಆಗಬೇಕು. ಜೆಡಿಎಸ್ (JDS) ಅನ್ನ ಅಧಿಕಾರಕ್ಕೆ ತರಬೇಕು ಅನ್ನೋದಕ್ಕಿಂತ ಇವತ್ತು ರಾಜ್ಯದ ರಾಜಕೀಯ ಹೇಗೆ ನಡೆಯುತ್ತಿದೆ ಅನ್ನೋದ್ರ ಬಗ್ಗೆ ಯೋಚಿಸಬೇಕು. ಈ ರಾಜ್ಯ ಸಂಪದ್ಭರಿತ ರಾಜ್ಯ. ಕಳೆದ 25-30 ವರ್ಷಗಳಲ್ಲಿ ದೇಶದ ಕೊಡುಗೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದ್ರೀಗ ರಾಜ್ಯದ ಸಾಲದ ಪ್ರಮಾಣ 7.5 ಲಕ್ಷ ಕೋಟಿ ರೂ. ಆಗಿದೆ. ಇದರಲ್ಲಿ ಸಿದ್ದರಾಮಯ್ಯ ಸಾಲದ ಪಾಲು 5.5 ಲಕ್ಷ ಕೋಟಿ ರೂ. ಇದೆ.
ಈ ನಾಡಿನ ಮೇಲೆ ಇಷ್ಟು ಸಾಲ ಹೊರಿಸಿದ್ದಾರೆ. ಈಗಾಗಲೇ ಬೇಸತ್ತಿರುವ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಾ ಇದ್ದಾರೆ. ಏಕೆಂದ್ರೆ ಈ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಚಿಂತೆಯಿಲ್ಲ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಹೊಸ ಕ್ರಾಂತಿಯ ಬಾಂಬ್ ಸಿಡಿಸಿದರು.


