ಇವತ್ತು ಅಧಿಕಾರದಲ್ಲಿರುವ ಸಿಎಂ ಅವ್ರನ್ನ ಅಂದು ಮಂತ್ರಿ ಮಾಡಿದ್ದು ನಾನು: ಹೆಚ್‌ಡಿ ದೇವೇಗೌಡ

0
Spread the love

ಬೆಂಗಳೂರು:- ಇವತ್ತು ಅಧಿಕಾರದಲ್ಲಿರುವ ಸಿಎಂ ಅವ್ರನ್ನ ಅಂದು ಮಂತ್ರಿ ಮಾಡಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಹೇಳಿದ್ದಾರೆ.

Advertisement

ಜೆಡಿಎಸ್ ಉದಯವಾಗಿ 25 ವರ್ಷ ತುಂಬಿದ ಹಿನ್ನೆಲೆ ಆಯೋಜಿಸಲಾಗಿದ್ದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು, ಯಾವ ಸಿಎಂ ಇವತ್ತು ಅಧಿಕಾರಿದಲ್ಲಿದ್ದಾರೋ ಅವರನ್ನು ಅಂದು ಡಿಸಿಎಂ, ಹಣಕಾಸು ಮಂತ್ರಿಯನ್ನಾಗಿ ಮಾಡಿದ್ದೆ ನಾನು. ಜೊತೆಗೆ ಸಿದ್ದರಾಮಯ್ಯರನ್ನು ಸಿಎಂ ಮಾಡೋಕೆ ಮೂರು ಬಾರಿ ಸೋನಿಯಾ ಗಾಂಧಿ ಮನೆಗೆ ಹೋಗಿದ್ದೆ ಎಂದರು.

ಈಗಲೂ ಸೋನಿಯಾಗಾಂಧಿ ಅವರ ಬಳಿ ಕೇಳಲಿ. ಜೆಡಿಎಸ್‌ನಲ್ಲಿ ಇದ್ದಿದ್ರೆ ಅಪ್ಪ, ಮಗ ಸಿಎಂ ಆಗಲು ಬಿಡ್ತಿರಲಿಲ್ಲ ಎನ್ನುತ್ತಾರೆ. ಆದರೆ ಆಗ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ಗೆ ಸಿಎಂ ಪಟ್ಟ ಕೊಡದಿದ್ರೆ ಚುನಾವಣೆಗೆ ಹೋಗ್ತೆವೆ ಎಂದಿದ್ರು. 2 ಕೋಟಿ ರೂ. ಸಾಲ ತಂದು ನಾನು ಚುನಾವಣೆಗೆ ಹೋಗಿದ್ದೆ. ಆನಂತರ ಶ್ರೀಮಾನ್ ಸಿದ್ದರಾಮಯ್ಯನವರನ್ನ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ಅವರೇನು ಆಕ್ಟ್‌ಫರ್ಡ್‌ ಯುನಿವರ್ಸಿಟಿಯಿಂದ ಅಧ್ಯಯನ ಮಾಡಿ ಬಂದಿದ್ರಾ? ಸುಪ್ರಿಂಕೋರ್ಟ್ ಲಾಯರ್ ಆಗಿದ್ರಾ? ಮೈಸೂರಲ್ಲಿ ಒಂದೆರಡು ಕೇಸ್ ಮಾಡಿದ್ರೊ ಇಲ್ವೋ ಗೊತ್ತಿಲ್ಲ.

ಸಾಲ ತಂದು ನೌಕರರಿಗೆ ಸಂಬಳ ಕೊಡ್ತಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರನ್ನಾಗಿ ಮಾಡಿದ್ದೆ. ಆಗ ಇವರ ಕೊಡುಗೆ ಏನಿತ್ತು ಎಂದು ಕಿಡಿಕಾರಿದ್ದಾರೆ. ಇಷ್ಟೆಲ್ಲ ಮಾಡಿ ಬಳಿಕ ಡೆಲ್ಲಿಗೆ ನೀರಾವರಿ ಯೋಜನೆ ರೂಪಿಸಿದೆ. ಆದರೆ ಅಂದು ಚಂದ್ರಬಾಬು ನಾಯ್ಡು ವಿರೋಧ ಮಾಡಿದ್ದರು. ಅವರ ಜೊತೆ ಮಾತಾಡಿ, ಸ್ಕೀಂಗೆ ಹಣ ಹೊಂದಿಸಲು ಯೋಜನೆ ಮಾಡಿದ್ವಿ. ಬಳಿಕ ಜೆಡಿಎಸ್ ಪಕ್ಷದ ಹಳೆ ಕಚೇರಿ ಬಗ್ಗೆ ಕೇಸ್ ಹಾಕಿಸಿ, ರಾತ್ರೋರಾತ್ರಿ ನಾವು ಹಳೆ ಕಚೇರಿ ಬಿಡುವಂತೆ ಮಾಡಿದ್ರು. ಈ ಜಾಗ ಕೊಡೋಕು ಕಿರಿಕ್ ಮಾಡಿದ್ರು. ಕೋರ್ಟ್ನಲ್ಲಿ ನಮ್ಮ ಪರ ಆಯ್ತು. ಆಗ ಕುರುಬರ ಹೆಣ್ಣು ಮಗಳು ಮೇಯರ್ ಆಗಿದ್ದಾಗ ಈ ಜಾಗ ಕೊಟ್ಟರು.

ಆದರೆ ಅದು ಸಿದ್ದರಾಮಯ್ಯಗೆ ಗೊತ್ತಾಗಿ ಹೇಗೆ ಕೊಟ್ರಿ ಅಂತ ಪ್ರಶ್ನೆ ಮಾಡಿ, ಅದಕ್ಕೂ ವಿರೋಧ ಮಾಡಿದ್ರು. ಅದಾದ ಬಳಿಕ ಧರಣಿ ಮಾಡ್ತಾರೆ ಅಂದ ಮೇಲೆ ಆರ್ಡರ್ ಪಾಸ್ ಮಾಡಿದ್ರು. ಅಷ್ಟೇ ಅಲ್ಲದೇ ಹೊಸ ಜೆಡಿಎಸ್ ಪಕ್ಷದ ಕಚೇರಿ ಮಾಡೋಕು ಸಿದ್ದರಾಮಯ್ಯ ಕಾಟ ಕೊಟ್ಟಿದ್ದರು. ನಾನು ಅಂದು ಕಣ್ಣೀರು ಹಾಕಿದ್ದೇನೆ. ಇವರನ್ನ ಡಿಸಿಎಂ, ಹಣಕಾಸು ಮಂತ್ರಿ ಮಾಡಿದೆ. ನಡೆದು ಬಂದ ದಾರಿ ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ. ಈ ಬಿಲ್ಡಿಂಗ್ ಕಟ್ಟೋವಾಗ ಕಷ್ಟಪಟ್ಟಿದ್ದೇವೆ. ರೇವಣ್ಣ ಬೆಳಗ್ಗೆ, ಸಂಜೆ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here