ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶುಕ್ರವಾರ ತಡರಾತ್ರಿ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಹೊರವಲಯದ ನೆಲೋಗಲ್ ಕ್ರಾಸ್ ಹತ್ತಿರ ಜಾನುವಾರುಗಳ ಕಳ್ಳತನ ಪ್ರಕರಣ ನಡೆದಿದ್ದು, ಈ ಕುರಿತು ಸರ್ಕಾರದ ತರ್ಫೇ ಪಿಎಸ್‌ಐ ಈರಪ್ಪ ರಿತ್ತಿ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ 1 ಆಕಳು, 3 ಸಣ್ಣ ಕೋಣಗಳು, 5 ಹೋರಿಕರು ಸೇರಿದಂತೆ 10 ಜಾನುವಾರುಗಳನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ಜಾನುವಾರುಗಳಿಗೆ ಹಿಂಸೆ ನೀಡುವ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಸೂಕ್ತ ಜಾಗ ಇಲ್ಲದಿದ್ದರೂ ಸಹ ಇಕ್ಕಟ್ಟಾಗಿ ಅವುಗಳನ್ನು ನಿಲ್ಲಿಸಿ ಅವುಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡದೇ ಉಪವಾಸ ಇಟ್ಟು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಪ್ರಿವೆನ್ಷನ್ ಆಫ್ ಕ್ರೂಯಾಲಿಟಿ ಟು ಎನಿಮಲ್ ಆ್ಯಕ್ಟ್-1960ನೇದ್ದರ ಅಡಿಯಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಸರ್ಕಾರಿ ತರ್ಪಿ ದೂರು ನೀಡಿ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿತರನ್ನು ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಪಿಎಸ್‌ಐ (ಅವಿ) ಎಸ್.ಟಿ. ಕಡಬಿನ ತನಿಖೆ ಕೈಗೊಂಡಿದ್ದಾರೆ.


