ಮಂಡ್ಯ: ಮದ್ದೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಮಾಜಿ ಪುರಸಭಾ ಅಧ್ಯಕ್ಷನನ್ನು ಅರೆಸ್ಟ್ ಮಾಡಲಾಗಿದೆ. ಮಾಜಿ ಪುರಸಭಾ ಅಧ್ಯಕ್ಷ ಎಂ.ಕೆ.ಮರೀಗೌಡ ಬಂಧಿತ ಆರೋಪಿಯಾಗಿದ್ದು,
ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಅರೆಸ್ಟ್ ಮಾಡಲಾಗಿದೆ. ಕಳೆದ ತಿಂಗಳ ಆಗಸ್ಟ್ 26 ರಂದು ನಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಮದ್ದೂರಿನ ದೊಡ್ಡಿ ಬೀದಿಯ ಗ್ಯಾಸ್ ಚಂದ್ರು ಮನೆಗೆ ಮುಸುಕುಧಾರಿಯಾಗಿ ಬಂದು ಕೃತ್ಯ ಎಸಗಿದ್ದು, ಮನೆಯಲ್ಲಿದ್ದ ಚಂದ್ರು ಪತ್ನಿ ಸುಶೀಲಮ್ಮರನ್ನು ಬೆದರಿಸಿ ಚಿನ್ನಾಭರಣ ದರೋಡೆ ಮಾಡಲಾಗಿದೆ.
ಆ ದಿನ ಪ್ರಕರಣ ಕೈಗೊತ್ತಿಕೊಂಡ್ರು ಗಣೇಶನ ಗಲಭೆಯಿಂದ ವಿಳಂಬವಾಗಿತ್ತು. ಗಣೇಶನ ಗಲಭೆ ಬಳಿಕ ಈ ಕಳ್ಳತನ ದ ಬಗ್ಗೆ ಎಸ್ಪಿಯಿಂದ ವಿಶೇಷ ತಂಡ ರಚನೆ ಮಾಡಲಾಗಿತ್ತು. ಅಂದಿನ ದಿನ ಅಲ್ಲಿನ ಸಿಸಿಟಿವಿಗಳ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಕಳ್ಳತನ ಮಾಡಿದ್ದ 15 ಲಕ್ಷದ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಇನ್ನೂ ಈ ಪ್ರಕರಣ ಸಂಬಂಧ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


