ನವೆಂಬರ್ 26ರಿಂದ ಆರಂಭವಾಗಲಿರುವ ದೇಶೀಯ ಟಿ20 ಕ್ರಿಕೆಟ್ ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಲಿದ್ದಾರೆ. ಈ ಬಾರಿ ತಂಡದಲ್ಲಿ ಎರಡು ಹೊಸ ಮುಖಗಳು ಅವಕಾಶ ಪಡೆದಿವೆ.
ಶ್ರೀಕರ್ ಶೆಟ್ಟಿ ಮತ್ತು ಶ್ರೀವತ್ಸ ಆಚಾರ್ಯ ಮೊದಲ ಬಾರಿಗೆ ಕರ್ನಾಟಕ ಟಿ20 ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ ವೇಳೆ ಅನುಭವಿ ಬ್ಯಾಟರ್ ಕರುಣ್ ನಾಯರ್ ಮರು ಪ್ರವೇಶ ಮಾಡಿದ್ದು, ತಂಡದ ಬಲವನ್ನು ಹೆಚ್ಚಿಸಿದೆ.
ಕರ್ನಾಟಕ ಟಿ20 ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಮ್ಯಾಕ್ನೀಲ್ ನೊರೊನ್ಹಾ, ಶ್ರೀಜಿತ್ ಕೆಎಲ್ (ವಿಕೆಟ್ ಕೀಪರ್), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಶ್ರೀವತ್ಸ ಆರ್ ಆಚಾರ್ಯ, ಶುಭಾಂಗ್ ಹೆಗ್ಡೆ, ಪ್ರವೀಣ್ ದುಬೆ, ಶರತ್ ಬಿಆರ್, ದೇವದತ್ ಪಡಿಕ್ಕಲ್.
ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮೊದಲ ಸುತ್ತಿನಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಜಾರ್ಖಂಡ್ ಹಾಗೂ ರಾಜಸ್ಥಾನ್ ತಂಡಗಳ ವಿರುದ್ಧ ಸೆಣಸಲಿದೆ. ಹಾಗೆಯೇ ಕರ್ನಾಟಕ ತಂಡದ ನಾಲ್ಕನೇ ಎದುರಾಳಿ ತಮಿಳುನಾಡು. ಈ ಪಂದ್ಯಗಳ ಬಳಿಕ ಕರ್ನಾಟಕ ತಂಡವು ದೆಹಲಿ, ಸೌರಾಷ್ಟ್ರ ಹಾಗೂ ತ್ರಿಪುರ ತಂಡಗಳನ್ನು ಎದುರಿಸಲಿದೆ.


