ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ.
ಕೆಎಲ್ ರಾಹುಲ್ ನಾಯಕತ್ವದ ಈ ತಂಡದಲ್ಲಿ ಈ ಬಾರಿ 8 ಮಂದಿ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಇದ್ದ ಕೆಲವರನ್ನು ಫಿಟ್‌ನೆಸ್ ಸಮಸ್ಯೆ, ವಿಶ್ರಾಂತಿ ಹಾಗೂ ಕಡಿಮೆ ಪ್ರದರ್ಶನದ ಕಾರಣ ಕೈ ಬಿಡಲಾಗಿದೆ.
ಕಣಕ್ಕಿಳಿಯದ ಆಟಗಾರರು:
ಶುಭ್‌ಮನ್ ಗಿಲ್: ಸೌತ್ ಆಫ್ರಿಕಾ ಟೆಸ್ಟ್ ವೇಳೆ ಕುತ್ತಿಗೆ ನೋವಿನಿಂದ ಬಳಲುತ್ತಿರುವ ಕಾರಣ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ.
ಶ್ರೇಯಸ್ ಅಯ್ಯರ್: ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಆಯ್ಕೆ ಮಾಡಿಲ್ಲ.
ಹಾರ್ದಿಕ್ ಪಾಂಡ್ಯ: ಫಿಟ್‌ನೆಸ್ ಸಮಸ್ಯೆ ಹಿನ್ನೆಲೆ ವಿಶ್ರಾಂತಿ; ಟಿ20 ಮೂಲಕ ಕಂಬ್ಯಾಕ್ ಮಾಡುವ ಸಾಧ್ಯತೆ.
ಮೊಹಮ್ಮದ್ ಸಿರಾಜ್: ಟೆಸ್ಟ್ ತಂಡದಲ್ಲಿ ಇದ್ದರೂ, ಏಕದಿನಗಳಿಗೆ ಅವರನ್ನು ಪರಿಗಣಿಸಲಾಗಿಲ್ಲ.
ಅಕ್ಷರ್ ಪಟೇಲ್: ಆಸ್ಟ್ರೇಲಿಯಾ ವಿರುದ್ಧ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ತಂಡದಿಂದ ಹೊರಕ್ಕೆ.
ವರುಣ್ ಚಕ್ರವರ್ತಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿದ್ದರೂ, ಏಕದಿನ ತಂಡದಲ್ಲಿ ಅವಕಾಶ ಇಲ್ಲ; ಟಿ20 ನಲ್ಲಿ ಕಾಣಿಸಿಕೊಳ್ಳುವರು.
ಜಸ್‌ಪ್ರೀತ್ ಬುಮ್ರಾ: ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ವಿಶ್ರಾಂತಿ.
ಮೊಹಮ್ಮದ್ ಶಮಿ: ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಆಗಿರಲಿಲ್ಲ; ಈ ಸರಣಿಯಿಂದಲೂ ಹೊರಗುಳಿದಿದ್ದಾರೆ.
ಭಾರತ ಏಕದಿನ ತಂಡ:
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ದ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.



