ಜ್ಞಾನವು ಅಜ್ಞಾನವನ್ನು ದೂರ ಮಾಡುತ್ತದೆ: ಡಾ. ರಾಜೇಂದ್ರ ಎಸ್.ಗಡಾದ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೀಪ ಜ್ಞಾನದ ಸಂಕೇತ. ಕತ್ತಲೆ ಅಜ್ಞಾನದ ಸಂಕೇತ. ಬೆಳಕು ಕತ್ತಲೆಯನ್ನು ದೂರ ಮಾಡುತ್ತ ಹೋದ ಹಾಗೆ ಜ್ಞಾನವು ಅಜ್ಞಾನವನ್ನು ದೂರ ಮಾಡುತ್ತದೆ. ಸರ್ವೋತ್ಕೃಷ್ಟ ಜ್ಞಾನಕ್ಕೆ ಶಿರಬಾಗಿ ನಮಿಸುವ ಪ್ರತೀಕವೇ ದೀಪ ಪ್ರಜ್ವಲನೆ. ಇದು ನಮ್ಮ ಎಲ್ಲ ಆಲೋಚನೆ, ಚಟುವಟಿಕೆಗಳಿಗೆ ಸಾಕ್ಷಿ ಎಂದು ಶ್ರೀಮಠದ ಶಿವಾನುಭವ ಸಮಿತಿಯ ಅಧ್ಯಕ್ಷ ಡಾ. ರಾಜೇಂದ್ರ ಎಸ್.ಗಡಾದ ಹೇಳಿದರು.

Advertisement

ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಶ್ರೀಮಠದಲ್ಲಿ ಆರಾಧ್ಯ ದೈವ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಕಾರ್ತಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಮಠದ ಜಾತ್ರಾ ಮಹೋತ್ಸವ ಸಮಿತಿಯ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುವರ್ಣಾ ಸದಾಶಿವ ಮದರಿಮಠ, ನಿವೃತ್ತ ಪ್ರಾಚಾರ್ಯ ಪ್ರೊ. ಕೆ.ಎಚ್. ಬೇಲೂರ, ನಿವೃತ್ತ ತಹಸೀಲ್ದಾರ ಎಲ್.ಎಸ್. ನೀಲಗುಂದ, ಕೈಗಾರಿಕೋದ್ಯಮಿ ಎಸ್.ಎಸ್. ಪಾಟೀಲ ಅರಹುಣಸಿ, ನಿವೃತ್ತ ಸಹಕಾರಿ ಇಲಾಖೆ ಅಧಿಕಾರಿ ಬಿ.ಎಂ. ಬಿಳೇಲಿ, ಎನ್.ಎಸ್. ಬಳಿಗಾರ, ಬಿ.ಡಿ. ಕಿಲಬನವರ, ಕೃಷಿ ವಿಜ್ಞಾನಿ ಡಾ. ಎಸ್.ಕೆ. ನಾಲವತ್ತವಾಡಮಠ, ಸುಶೀಲಾ ಗಂಗಣ್ಣ ಕೋಟಿ, ನಿವೃತ್ತ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಸವರಾಜ ಪಲ್ಲೇದ ಪಾಲ್ಗೊಂಡಿದ್ದರು.

ಗೀತಾ ಹೂಗಾರ, ಸೀಮಾ ಗುಣದಾಳಮಠ, ಶ್ರೀಮತಿ ಬಡಿಗೇರ, ಶಾಂತಾ ಹಿರೇಒಡೆಯರ, ಮಂಗಳಾ ಯಾನಮಶೆಟ್ಟಿ ಅವರು ಶ್ರೀದೇವಿಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಿವಾನುಭವ ಸಮಿತಿ ಕಾರ್ಯದರ್ಶಿ ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ವೇ.ಮೂ ವೀರೇಶ್ವರ ಸ್ವಾಮಿಗಳು ಹೊಸಹಳ್ಳಿಮಠ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪ್ರೊ. ವಿ.ಎಂ. ಕುಂದ್ರಾಳಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಮಾರುತಿ ಹೆಬ್ಬಾರ ವಂದಿಸಿದರು.

ಸಮಾರಂಭದಲ್ಲಿ ಹಿರಿಯರಾದ ಜಿ.ಎಂ. ಯಾನಮಶೆಟ್ಟಿ, ಗುರಪ್ಪ ನಿಡಗುಂದಿ, ಪ್ರಮಿಳಾದೇವಿ ಬಳಿಗಾರ, ಅನ್ನಪೂರ್ಣಮ್ಮನವರು ಹೊಸಳ್ಳಿಮಠ, ಪ್ರಕಾಶ ಬಂಡಿ, ಸಿ.ಬಿ. ಹಿರೇಮಠ, ಮಾಲತೇಶ ಪಾಟೀಲ ವಕೀಲರು, ವೀರಣ್ಣ ಹೂಗಾರ, ಸವಿತಾ ಹೊಸಳ್ಳಿಮಠ, ವಿಜಯಲಕ್ಷ್ಮೀ ಹೊಸಳ್ಳಿಮಠ ಸೇರಿದಂತೆ ಶ್ರೀಮಠದ ಸದ್ಭಕ್ತರು, ಶಿವಾನುಭವ ಸಮಿತಿ ಹಾಗೂ ಜಾತ್ರಾಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.


ಬಾಕ್ಸ್

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ವೇದಮೂರ್ತಿ ಶ್ರೀಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಮಾತನಾಡಿ, ಜ್ಞಾನ, ಕರುಣೆ, ಸದ್ಭಾವನೆಗಳೇ ಈ ದೀಪಗಳು. ನಾವು ನಮ್ಮೊಳಗಿನ ಕೆಟ್ಟ ವಿಚಾರಗಳು, ಅಸೂಯೆ ಮತ್ತು ಸ್ವಾರ್ಥಗಳನ್ನು ದೂರಮಾಡಿ, ಪ್ರೀತಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳೋಣ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here