ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ, ಕನ್ನಡಿಗ ಮತ್ತು ಕರ್ನಾಟಕತ್ವದ ಪ್ರತಿನಿಧಿಯಾಗಿ ಏಕೀಕರಣ ಪೂರ್ವದಿಂದಲೂ ನಾಡಸೇವೆಯನ್ನು ಮಾಡುತ್ತಾ ಬಂದಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಗೆ ಆರ್ಥಿಕ ಸದೃಢತೆ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕನ್ನಡಿಗ ಇದರ ಪೋಷಣೆ ಮಾಡಬೇಕು. ಇಂತಹ ಸಂಸ್ಥೆಯ ಪ್ರಾರಂಭಿಕ ಅಧ್ಯಕ್ಷರಾಗಿ ಪ್ರೊ. ಸಿ.ವಿ. ಕೆರಿಮನಿ ಅವರು ಅವಿಸ್ಮರಣೀಯ ಕಾರ್ಯವನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗಿದ ಪ್ರೊ. ಸಿ.ವಿ. ಕೆರಿಮನಿ ‘ತಿರುಳ್ಗನ್ನಡ ಸಿರಿ’ ದತ್ತಿ ಪ್ರಶಸ್ತಿ ಸಮಾರಂಭದಲ್ಲಿ ಸಾಹಿತಿ ಡಿ.ವಿ. ಬಡಿಗೇರ ಹಾಗೂ ಕೊತ್ತಲ ಮಹಾದೇವಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಗದಗ ಪರಿಸರದ ಕನ್ನಡ ಕಂಪನ್ನು ನಾಡಿನ ತುಂಬೆಲ್ಲಾ ಸಿ.ವಿ. ಕೆರಿಮನಿ ಅವರು ತಮ್ಮ ಪುಸ್ತಕ ಹಾಗೂ ಸಂಘಟನೆ ಮೂಲಕ ಪಸರಿಸಿದ್ದಾರೆ. ಸ್ವತಃ ಬರಹಗಾರರಾಗಿರುವ ಲಲಿತಮ್ಮ ಕೆರಿಮನಿ ಹಾಗೂ ಕುಟುಂಬದವರು ಆ सेवೆಯನ್ನು ಈ ಮೂಲಕ ನಡೆಸಿಕೊಂಡು ಹೋಗುತ್ತಿರುವದು ಅನುಕರಣೀಯ ಎಂದು ತಿಳಿಸಿದರು.
ಪ್ರೊ. ಸಿ.ವಿ.ಕೆ ಸಂಸ್ಮರಣೆಗೈದ ಸಿ.ಜಿ. ಹಿರೇಮಠ ಅವರು, ತಿರುಳ್ಗನ್ನಡದ ಮಧ್ಯ ನಾಡಾದ ಲಕ್ಷ್ಮೇಶ್ವರದಲ್ಲಿ ಸಾಹಿತ್ಯ ಸೊಗಡನ್ನು ಬಿತ್ತಿದ್ದಾರೆ. ಗದಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ಎರಡು ಅವಧಿಗೆ ಅಧ್ಯಕ್ಷರಾಗಿ ಕಾರ್ಯಮಾಡಿ ಅನೇಕ ಕವಿ ಕಲಾವಿದರಿಗೆ ಅವಕಾಶ ಕಲ್ಪಿಸಿದ್ದಾರೆ. ಬರಹಗಾರರಾಗಿ, ಸಂಘಟಕರಾಗಿ, ಪ್ರಾಧ್ಯಾಪಕರಾಗಿ ಕನ್ನಡದ ಸೇವೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಗದಗ ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ಭದ್ರ ಬುನಾದಿಯನ್ನು ಒದಗಿಸಿದ ಸಿ.ವಿ.ಕೆ ಅವರು ಮನೆ ಮನೆ ಸಾಹಿತ್ಯ ಗೋಷ್ಠಿಯ ಮೂಲಕ ಮನೆಮಾತಾದರು. ಅವರ ಸೇವೆಯನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ ಕೆರಿಮನಿ ಕುಟುಂಬದವರು ಪ್ರಶಸ್ತಿ ನೀಡುವ ಮೂಲಕ ಕನ್ನಡದ ಸೇವಕರನ್ನು ಗೌರವಿಸುವ ಕಾರ್ಯ ಮಾಡುತ್ತಿರುವದು ಮಾದರಿಯಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತ ಡಿ.ವಿ. ಬಡಿಗೇರ ಮಾತನಾಡಿ, ಸಿ.ವಿ. ಕೆರಿಮನಿ ಅವರ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಮಾಡಿದ ಕನ್ನಡದ ಕಾರ್ಯಗಳನ್ನು ಸ್ಮರಿಸಿಕೊಂಡರು. ಕೊತ್ತಲ ಮಹಾದೇವಪ್ಪನವರು ಮಾತನಾಡಿ, ಸಿ.ವಿ. ಕೆರಿಮನಿ ಅವರ ಮಾರ್ಗದರ್ಶನ ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು. ಈ ಹಿನ್ನೆಲೆಯಲ್ಲಿ ಅನೇಕ ಬರಹಗಳು, ಪುಸ್ತಕಗಳು ಪ್ರಕಟಗೊಳ್ಳಲು ಸಾಧ್ಯವಾಯಿತೆಂದು ತಿಳಿಸಿದರು.
ವೇದಿಕೆಯಲ್ಲಿ ದತ್ತಿದಾನಿ ಲಲಿತಮ್ಮ ಸಿ.ಕೆರಿಮನಿ, ಸೋಮಶೇಖರ ಕೆರಿಮನಿ ಉಪಸ್ಥಿತರಿದ್ದರು. ಅನ್ನದಾನಿ ಹಿರೇಮಠ ಮಾತನಾಡಿದರು. ಕನ್ನಡ ಜಾಗೃತ ಜಿಲ್ಲಾ ಸಮಿತಿಗೆ ನೇಮಕಗೊಂಡ ಪ್ರಾಚಾರ್ಯ ಡಾ. ರಾಜಶೇಖರ ದಾನರಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕೊತಬಾಳದ ಜನಪದ ಕಲಾವಿದ ಶಂಕರಣ್ಣ ಸಂಕಣ್ಣವರ ಹಾಗೂ ತಂಡದವರಿಂದ ನಾಡು-ನುಡಿ ಗೀತ ಗಾಯನ ಮನಸೆಳೆಯಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಶಿವಪ್ಪ ಕುರಿ, ಎಸ್.ಯು. ಸಜ್ಜನಶೆಟ್ಟರ, ರಾಜಶೇಖರ ಕರಡಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಬೂದಪ್ಪ ಅಂಗಡಿ, ಸಿ.ಕೆ.ಎಚ್. ಕಡಣಿ ಶಾಸ್ತ್ರಿ, ಎಸ್.ಆರ್. ಚನ್ನಪಗೌಡರ, ರವಿ ದೇವರಡ್ಡಿ, ಉಮಾ ಕಣವಿ, ಡಾ. ಗಂಗೂಬಾಯಿ ಪವಾರ, ರಾಮಚಂದ್ರ ಮೋನೆ, ಬಿ.ಜೆ. ಪಾಟೀಲ, ಎಮ್.ಎಚ್. ಯಲಿಗಾರ, ಎಸ್.ಎ. ಸೋಮಗೊಂಡ, ದುರಗಪ್ಪ ಕುಷ್ಟಗಿ, ಜಯದೇವ ಮೆಣಸಗಿ, ಪ್ರಹ್ಲಾದ್ ನಾರಪ್ಪನವರ, ಆರ್.ಕೆ. ನರೇಗಲ್, ಗಂಗವ್ವ ಮುದಗಲ್, ಜೆ.ಎಸ್. ರಾಮಶೆಟ್ರ, ಎಸ್.ಎಫ್. ಆದಿ, ಜೆ.ಡಿ. ಲಮಾಣಿ, ಕೆ.ಎಸ್. ಜಯದೇವಭಟ್, ಎಚ್.ಜಿ. ದುರಗಣ್ಣವರ, ಅನ್ನಪೂರ್ಣ ಓದುನವರ, ವಿಮಲಾ ಅಡವಿ, ಗೌರಿ ಸಂಗಪ್ಪಶೆಟ್ಟರ, ಪಾರ್ವತಿ ಕಳ್ಳೀಮಠ, ಕಾಂಚನಾ ಹಸರಡ್ಡಿ, ರತ್ನಾ ಕರ್ಕಿ, ಜಯಶ್ರೀ ಮೆಳಿಗೇರಿ, ವಿಜಯ ಬಾಳಿಕಾಯಿ, ಸರೋಜಾ ಬನ್ನೂರ, ಮಲ್ಲಮ್ಮ ಕೊತ್ತಲ, ಲಕ್ಷ್ಮಿ ಕೆರಿಮನಿ, ಶಾರದಾ ಕುರವತ್ತಿ, ಜಯಶ್ರೀ ಗುಡಗೇರಿ, ವಿಜಯಶ್ರೀ ಅಂಗಡಿ, ಮಾಲಾದೇವಿ ದಂದರಗಿ, ಮೇಘಾ ಹುಕ್ಕೇರಿ, ರತ್ನಕ್ಕ ಪಾಟೀಲ, ರಾಹುಲ ಗಿಡ್ನಂದಿ, ಗುರುರಾಜ ಹವಳದ, ಗಜಾನನ ವೇರ್ಣೇಕರ, ವೆಂಕಟೇಶ ಮಾತಾಡೆ, ಎಂ.ಕೆ. ಕಳ್ಳೀಮಠ, ಜಯಪ್ರಕಾಶ ದೊಡ್ಡೂರ, ವಿಶ್ವನಾಥ ಹುಣಸಿಮರದ, ಶೇಖಣ್ಣ ಕಳಸಾಪೂರಶೆಟ್ಟರ, ಸತೀಶ ಕುಲಕರ್ಣಿ, ಬಸವರಾಜ ನೆಲಜೇರಿ, ನೀಲಮ್ಮ ಅಂಗಡಿ, ಮಂಜುಳಾ ವೆಂಕಟೇಶಯ್ಯ, ಯಶೋಧಾ ಗಿಡ್ನಂದಿ, ರತ್ನಾ ಗಾರ್ಗಿ, ಶಾಂತಾ ಗಣಪ್ಪನವರ, ಉಮಾ ಕಣವಿ ಮೊದಲಾದವರು ಭಾಗವಹಿಸಿದ್ದರು.


