ಸಿನೆಮಾ ಶೂಟಿಂಗ್‌ಗೆ ಬಳಸುತ್ತಿದ್ದ ವಾಹನದ ಚಾಲಕನಿಗೆ ಪೊಲೀಸರ ಎಚ್ಚರಿಕೆ
ವಿಜಯಸಾಕ್ಷಿ ಸುದ್ದಿ, ಗದಗ
ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟದಿಂದ ನಗರದ ಜನರು ಗೊಂದಲಕ್ಕೀಡಾಗಿದ ಘಟನೆ ನಡೆಯಿತು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಯೂಸುಫ್ ಡಂಬಳ, ಪೊಲೀಸ್ ನಾಮಫಲಕ, ಎರಡೆರಡು ನಂಬರ್ ಇರುವುದನ್ನು ಗಮನಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಇವರಿಗೆ ಕ್ರಾಂತಿ ಸೇನಾ ಸಂಘಟನೆಯ ಸದಸ್ಯರು ಸಾಥ್ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು.

ಬಳಿಕ ಸಿನಿಮಾ ಶೂಟಿಂಗ್‌ಗೆ ಬಳಸುತ್ತಿದ್ದ ವಾಹನ ಎಂದು ತಿಳಿದುಬಂದ ಕಾರಣ ಚಾಲಕನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ `ಕ್ಷೇತ್ರಪತಿ’ ಸಿನಿಮಾ ಶೂಟಿಂಗ್ ನಡೆದಿದ್ದು, ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಬೊಲೆರೋ ವಾಹನ ಬಳಸಲಾಗಿತ್ತು. ವಾಹನದ ಹಿಂದೆ ಅಸಲಿ ನಂಬರ್ ಪ್ಲೇಟ್, ಮುಂಭಾಗ ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸ್ ಎಂದು ಬರೆದಿದ್ದು ಕಂಡು ಕೆಲಕಾಲ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು.