ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವಕರ್ಮ ಸಾಮಾಜದವರು ತಮ್ಮ ಕ್ರಿಯಾತ್ಮಕ ಬದುಕಿನ ಮೂಲಕ ಉತ್ತಮ ಸ್ಥಾನ ಗಳಿಸಿ ಮೇರು ಸಾಧನೆ ಮಾಡುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಸಮರ್ಪಣಾಭಾವ ಮತ್ತು ಪರಿಶ್ರಮದಿಂದ ತಮ್ಮ ಜೀವನಶೈಲಿಯನ್ನು ಉತ್ಕೃಷ್ಟಗೊಳಿಸಿಕೊಂಡ ಪ್ರತ್ಯಕ್ಷ ಸಾಕ್ಷಿಗಳು ನಮ್ಮ ಮುಂದೆ ಇವೆ ಎಂದು ಶ್ರೀಧರ ಕೊಣ್ಣೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಟಗೇರಿಯ ಹೊಸಪೇಟ ಚೌಕ ಓಣಿಯ ಕಾಳಿಕಾ ದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಶರನ್ನವರಾತ್ರಿ ಉತ್ಸವ ಸಮಿತಿ-25 ಮತ್ತು ವಿಶ್ವಕರ್ಮ ಗಾಯತ್ರಿ ಮಹಿಳಾ ಮಂಡಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಛಟ್ಟಿ ಅಮವಾಸ್ಯೆಯ ಪಾಲಕಿ ಉತ್ಸವ, ಮೌನೇಶ್ವರ ವಚನ ಪಠಣ ಮತ್ತು ಚಿಂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಲೋಯಲಾ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ವಿಜಯರಾಘವೇಂದ್ರ ಬೆಂತೂರ ಮೌನೇಶ್ವರ ವಚನ ಪಠಣ ಮಾಡಿ ಗಮನ ಸೆಳೆದಳು.
ಟ್ರಸ್ಟ್ ಉಪಾಧ್ಯಕ್ಷ ಅಶೋಕ ಸುತಾರ, ಕೋಶಾಧ್ಯಕ್ಷ ವಿಜಯರಾಘವೇಂದ್ರ ಬೆಂತೂರ, ನಿರ್ದೇಶಕರಾದ ರಾಘವೇಂದ್ರ ಬಡಿಗೇರ, ಮಂಜುನಾಥ ಬೆಂತೂರ, ವಿಠ್ಠಲ ಬೆಂತೂರ, ವಿನಾಯಕ ರಾಮದುರ್ಗಾ, ಅರ್ಚಕ ಸುರೇಶ ಬಡಿಗೇರ ಇವರಿಂದ ಕಾಳಿಕಾ ಸ್ತುತಿ ಜರುಗಿತು. ಪಾಲಕಿ ಉತ್ಸವ ಸೇವೆ ವಹಿಸಿಕೊಂಡ ಬೆಂತೂರ ಪರಿವಾರದವರ ಪರವಾಗಿ ಹಿರಿಯರಾದ ಲಕ್ಷ್ಮಣ ಬೆಂತೂರ, ಉಪನ್ಯಾಸ ನೀಡಿದ ಶಿಕ್ಷಕಿ ಲತಾ ಬಡಿಗೇರ, ವಚನ ಪಠಣ ಮಾಡಿದ ಶ್ರೀರಕ್ಷಾ ಇವರನ್ನು ಕಮಿಟಿಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಶ್ರೀಧರ ತೋಟಗಂಟಿ, ಪ್ರಕಾಶ ಬಡಿಗೇರ, ಮಹಿಳಾ ಮಂಡಳದ ಅಧ್ಯಕ್ಷರಾದ ಭಾರತಿ ಹೊರಪೇಟ, ವಿಜಯಲಕ್ಷ್ಮೀ ಕೊಣ್ಣೂರ, ಲಕ್ಷ್ಮೀ ಕೊಣ್ಣೂರ, ಗೀತಾ ಬೆಂತೂರ, ಶಿಲ್ಪಾ ಹುಯಿಲಗೋಳ, ಕಾವ್ಯ ಬೆಂತೂರ ಭಾಗವಹಿಸಿದ್ದರು.
ಶ್ರೀರಕ್ಷಾ ಮತ್ತು ಸರೋಜ ಬೆಂತೂರ ಪ್ರಾರ್ಥಿಸಿದರು. ಉಪನ್ಯಾಸಕರಾದ ಮಂಜುನಾಥ ಅಕ್ಕಸಾಲಿ ಸ್ವಾಗತಿಸಿದರು. ಶಿಕ್ಷಕರಾದ ಸತೀಶ ಹೊರಪೇಟ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಾಘವೇಂದ್ರ ಬಡಿಗೇರ ವಂದಿಸಿದರು.
ಬೆಟಗೇರಿ ಎಸ್.ಎಸ್.ಕೆ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ಲತಾ ಎಮ್.ಬಡಿಗೇರ ಮಾತನಾಡಿ, ವಿಶ್ವಕರ್ಮರು ತಮ್ಮ ವೃತ್ತಿ ದೇವ ವಿಶ್ವಕರ್ಮನಿಗೆ ಗೌರವಪೂರಕವಾಗಿ ಪೂಜೆ ಮಾಡುವ ಸಂಪ್ರದಾಯವನ್ನು ಕಾಣುತ್ತೇವೆ. ಗುಡ್ಡಾಪೂರ ದಾನಮ್ಮ ಜಾತ್ರೆ ಇದೇ ಸಮಯದಲ್ಲಿ ಜರುಗುತ್ತಿರುವುದನ್ನು ಕಾಣಬಹುದಾಗಿದೆ ಎಂದು ಛಟ್ಟಿ ಅಮವಾಸ್ಯೆ, ಕಾರ್ತಿಕ ದೀಪೋತ್ಸವ ಕುರಿತು ಪರಿಚಯ ಮಾಡಿಕೊಟ್ಟರು.



