ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ: ರಾಜೀವ್ ರೈ

0
Spread the love

ಬೆಂಗಳೂರು:- ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಎಂದು ಸಮಾಜವಾದಿ ಪಕ್ಷದ ಎಂಪಿ ರಾಜೀವ್ ರೈ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಿನ್ನೆ ಅಂದ್ರೆ ಭಾನುವಾರ ಏರ್‌ಪೋರ್ಟ್‌ಗೆ ತೆರಳಬೇಕಾಗಿದ್ದ ರಾಜೀವ್, ರಾಜ್ ಸಮಾಧಿ ರಸ್ತೆಯ ಬಳಿ ಒಂದು ಗಂಟೆಗಳ ಕಾಲ ಜಾಮ್‌ನಲ್ಲಿ ತಗ್ಲಾಕ್ಕೊಂಡಿದ್ದರು. ಹೀಗಾಗಿ ವಿಮಾನ ಮಿಸ್ ಆಗುವ ಆತಂಕದಲ್ಲಿ ಇದ್ದರು. ಇದರಿಂದ ಸಿಟ್ಟಿಗೆದ್ದ ರಾಜೀವ್ ರೈ ಸಿಎಂ ಸಿದ್ದರಾಮಯ್ಯ ಅವರನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಹರಿಹಾಯ್ದಿದ್ದಾರೆ.

ಟ್ರಾಫಿಕ್ ಕ್ಲಿಯರೆನ್ಸ್‌ಗೆ ಟ್ರಾಫಿಕ್ ಪೊಲೀಸರಿಗೆ ಕರೆ ಮಾಡಿದ್ರೆ ಕರೆಯನ್ನು ಸ್ವೀಕರಿಸಿಲ್ಲ ಸುತ್ತಾಮುತ್ತ ಒಬ್ರೂ ಟ್ರಾಫಿಕ್ ಪೊಲೀಸರು ಕೂಡ ಇರಲಿಲ್ಲ. ಚಂದದ ಸಿಟಿಯ ಹೆಸರು ಹಾಳು ಮಾಡಲು ಇಂತಹ ಅಧಿಕಾರಿಗಳು ಸಾಕು ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ ನಾನು ಅವರ ಜತೆ ದೆಹಲಿಯಲ್ಲಿ ಭೇಟಿ ಮಾಡಿ ಮಾತನಾಡುತ್ತೇನೆ. ಬೆಂಗಳೂರು ಏನು, ಅದರ ಮಹತ್ವದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here