ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳಿಗೆ ಬೆಂಬಲ ಬೆಲೆ ಒದಗಿಸಬೇಕು ಹಾಗೂ ಪ್ರತಿ ಹೋಬಳಿ ಮಟ್ಟದಲ್ಲಿ ಶೀಘ್ರದಲ್ಲೇ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ತಾಲೂಕು ಬಿಜೆಪಿ ವತಿಯಿಂದ ಮಾಜಿ ಶಾಸಕ ಜಿ. ಕರುಣಾಕರ ರೆಡ್ಡಿ ನೇತೃತ್ವದಲ್ಲಿ ನಗರದ ಹರಿಹರ ವೃತ್ತದಿಂದ ಐಬಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಜಿ. ಕರುಣಾಕರ ರೆಡ್ಡಿ, ರಾಜ್ಯ ಸರ್ಕಾರವು ರೈತರ ಪರ ಕಾಳಜಿ ವಹಿಸದೆ ಮುಖ್ಯಮಂತ್ರಿ ಖುರ್ಚಿ ಕಾಳಗದಲ್ಲಿ ನಾ ಮುಂದು-ತಾ ಮುಂದು ಎನ್ನುವಂತೆ ಹೋರಾಟಕ್ಕೆ ಇಳಿದು ಲಜ್ಜೆಗೆಟ್ಟ ಆಡಳಿತ ಮಾಡುತ್ತಿದೆ. ಅತಿವೃಷ್ಟಿಯಿಂದ ನಷ್ಟವಾಗಿರುವ ರೈತರ ಬೆಳೆಗಳಿಗೆ ಪರಿಹಾರ ಒದಗಿಸಬೇಕು. ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ತೊಗರಿ ಬೆಳೆ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಕಳೆದ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ಒದಗಿಸುತ್ತಿಲ್ಲ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದೆ ಶಾಸಕರ ಖರೀದಿಯಲ್ಲಿ ಸರ್ಕಾರ ಮುಂದಾಗಿದೆ. ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಿದಂತೆ ಮೆಕ್ಕೆಜೋಳ ಬೆಳೆಗಾರರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಜಿ. ಸಿದ್ದೇಶ್, ಪಂಪಾನಾಯ್ಕ, ಮುಖಂಡರಾದ ಆರುಂಡಿ ನಾಗರಾಜ, ಬಾಗಳಿ ಕೊಟ್ರೆಶಪ್ಪ, ಆರ್. ಲೋಕೇಶ್, ಕೆಂಚಪ್ಪ, ಟಿ. ತಿಮ್ಮಣ್ಣ, ಪ್ರಸನ್ನ, ಮಹಾಂತೇಶ್, ದ್ಯಾಮಣ್ಣ, ಕಲ್ಲೇರ ಬಸವರಾಜ, ಕಲ್ಲನಗೌಡ, ಬಸವನಗೌಡ, ಬಸವರಾಜ ಕೆ, ಗಂಗಾನಾಯ್ಕ, ಬಾಗಳಿ ಬಿ.ವೈ. ಹಾಲೇಶ್, ನಿರಂಜನ್, ಚಿಕ್ಕಹಳ್ಳಿ ನಾಗಪ್ಪ, ಜಗದೀಶ್, ಭೋವಿ ಅಜ್ಜಯ್ಯ, ಟಿ.ಎಸ್. ಕರಿಯಪ್ಪ ಮುಂತಾದವರಿದ್ದರು.


