ಶಿವಸಂಗಮ ಚಿಟ್ಸ್ ದಿನದರ್ಶಿಕೆ ಲೋಕಾರ್ಪಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಶಿವಸಂಗಮ ಚಿಟ್ಸ್ ಮತ್ತು ಶಿವಸಂಗಮ ಫೈನಾನ್ಸ್ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿಯ ಶಿವಸಂಗಮ ಚಿಟ್ಸ್ ಕಾರ್ಯಾಲಯದಲ್ಲಿ ಹೊಸ ವರ್ಷದ ದಿನದರ್ಶಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ರಾಠೋಡರನ್ನು ಸನ್ಮಾನಿಸಲಾಯಿತು.

Advertisement

ದಿನದರ್ಶಿಕೆ ಲೋಕಾರ್ಪಣೆಗೊಳಿಸಿದ ಶಿವಸಂಗಮ ಸಂಸ್ಥೆಯ ನಿರ್ದೇಶಕ ಮಹೇಶ ಗಾಣಗೇರ ಮಾತನಾಡಿ, ಶಿವಸಂಗಮ ಚಿಟ್ಸ್ ಸಂಸ್ಥೆ ಹಲವು ವರ್ಷಗಳಿಂದ ಗ್ರಾಹಕ ಸ್ನೇಹಿ ಸೇವೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯಿಂದ ಹಣಕಾಸು ವಲಯದಲ್ಲಿ ಜನಮನ ಗೆದ್ದಿದೆ. ಪ್ರತಿವರ್ಷ ಪ್ರಕಟಿಸುತ್ತಿರುವ ದಿನದರ್ಶಿಕೆ ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಹೊಸ ವರ್ಷದ ಈ ಲೋಕಾರ್ಪಣೆ ಸಂಸ್ಥೆಯ ಮುಂದಾಳುತ್ವಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದು ಪ್ರಶಂಸಿಸಿದರು.

ಶಿವಸಂಗಮ ಚಿಟ್ಸ್ ವ್ಯವಸ್ಥಾಪಕ ರಾಘವೇಂದ್ರ ಬಿನ್ನಾಳ ಮಾತನಾಡಿ, ಹೊಸ ವರ್ಷದಲ್ಲಿ ನಮ್ಮ ಸೇವೆಗಳನ್ನು ಇನ್ನಷ್ಟು ವಿಸ್ತರಿಸಿ, ಗ್ರಾಹಕರಿಗೆ ಸುಲಭ ಮತ್ತು ಸುರಕ್ಷಿತ ಹೂಡಿಕೆ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಗುರಿ. ಜನರು ತೋರುತ್ತಿರುವ ಬೆಂಬಲಕ್ಕೆ ನಾವು ಕೃತಜ್ಞರು ಎಂದು ತಿಳಿಸಿದರು.

ಲೋಕಾರ್ಪಣೆಯ ಬಳಿಕ ದಿನದರ್ಶಿಕೆಗಳನ್ನು ಅತಿಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಹಸನಸಾಬ ಮುಜಾವರ, ರೇಣುಕಾ ಇಟಗಿ, ಮುತ್ತು ಕುಷ್ಟಗಿ, ಸಂಗಮೇಶ ಹಿರೇಗೌಡರ, ಚಂದ್ರೇಶೇಖರ ನಾಡಗೌಡರ, ಅರುಣ ಪೂಜಾರ, ನಾಗರಾಜ ಮಂತಾ, ಬಸುವರಾಜ ಕುರುಬರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here