HomeGadag Newsಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನೇತೃತ್ವದಲ್ಲಿ ಆರ್‌ಪಿಆರ್‌ಪಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನೇತೃತ್ವದಲ್ಲಿ ಆರ್‌ಪಿಆರ್‌ಪಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು 2025-26ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಆರ್‌ಪಿಆರ್‌ಪಿ ಯೋಜನೆಯನ್ನು ಘೋಷಿಸಿದೆ. ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (ಖುಡಿಚಿಟ Pಡಿosಠಿeಡಿiಣಥಿ & ಖesiಟieಟಿಛಿe Pಡಿogಡಿಚಿmme-ಖPಖP) ಎಂಬ ಹೆಸರಿನ ಈ ಬಹುಕ್ಷೇತ್ರ ಯೋಜನೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಕೃಷಿ ಉತ್ಪಾದಕತೆಯನ್ನು ವೃದ್ಧಿಸುವುದು ಹಾಗೂ ಸಮಗ್ರ ಅಭಿವೃದ್ಧಿಯನ್ನು ತರಲು ವಿನ್ಯಾಸಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಆರ್.ಪಿ.ಆರ್.ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಯೋಜನೆಯ ಉದ್ದೇಶ ರಾಜ್ಯ ಸರ್ಕಾರಗಳು ಹಾಗೂ ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಗ್ರಾಮೀಣ ಬದುಕಿನ ಗುಣಮಟ್ಟ ಹೆಚ್ಚಿಸುವ ಆದ್ಯತೆಯ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ಉದ್ಯೋಗ ಸೃಷ್ಟಿ, ಉದ್ಯಮಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಮೂಲಸೌಕರ್ಯ ವಿಕಾಸವೇ ಈ ಕಾರ್ಯಕ್ರಮದ ಮುಖ್ಯ ಆಧಾರಸ್ತಂಭಗಳಾಗಿವೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರು, ಯುವಕರು ಹಾಗೂ ಭೂ ರಹಿತ ಮತ್ತು ಸಣ್ಣ ರೈತ ಕುಟುಂಬಗಳ ಸಬಲೀಕರಣವನ್ನು ಈ ಯೋಜನೆಯ ಕೇಂದ್ರಭಾಗವಾಗಿ ಪರಿಗಣಿಸಲಾಗಿದೆ ಎಂದರು.

ಗ್ರಾಮೀಣ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳು, ಸ್ವಯಂ ಉದ್ಯೋಗ ಮತ್ತು ಸಣ್ಣ, ಮಧ್ಯಮ ಮಟ್ಟದ ಉದ್ಯಮ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ತಂತ್ರಜ್ಞಾನ ಬಳಕೆಯನ್ನು ಗ್ರಾಮ ಮಟ್ಟಕ್ಕೆ ತಂದುಕೊಡುವ ಮೂಲಕ ಸೇವಾ, ಉತ್ಪಾದನಾ ಮತ್ತು ಕೃಷಿ ಆಧಾರಿತ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಯೋಜನೆ ಇದಾಗಿದೆ. ಇದನ್ನು ಸಮರ್ಪಕವಾಗಿ ವಿವಿಧ ಇಲಾಖೆಗಳು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕಿದೆ ಎಂದು ತಿಳಿಸಿದರು.

ಗ್ರಾಮೀಣ ಮಹಿಳೆಯರು, ಯುವ ರೈತರು ಮತ್ತು ಗ್ರಾಮೀಣ ಯುವಕರು, ಅಲ್ಪ ಮತ್ತು ಸಣ್ಣ ರೈತರು, ಭೂ ರಹಿತ ಕುಟುಂಬಗಳು ಈ ಯೋಜನೆಯ ಪ್ರಮುಖ ಗುರಿ ಲಾಭಾರ್ಥಿಗಳಾಗಿದ್ದು, ಅವರಿಗೆ ಶಾಶ್ವತ ಆದಾಯ ಹಾಗೂ ಬದುಕಿನ ಭದ್ರತೆ ಒದಗಿಸುವುದು ಆರ್‌ಪಿಆರ್‌ಪಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿ ರಾಘವೇಂದ್ರ ಮಾತನಾಡಿ, ಆರ್‌ಪಿಆರ್‌ಪಿ ಯೋಜನೆ ಕುರಿತು ಇಲಾಖಾಧಿಕಾರಿಗಳು ನೀಡಿದ ಮಾಹಿತಿಯನ್ನು ಗಮನಿಸಿ ಆರ್‌ಪಿಆರ್‌ಪಿ ಯೋಜನೆಯನ್ನು ಗದಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗ ಅನುಷ್ಠಾನಗೊಳಿಸಲು ವಿಫಲ ಅವಕಾಶವಿದ್ದು, ಗ್ರಾಮೀಣ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು.

ಆರ್‌ಪಿಆರ್‌ಪಿ ಯೋಜನೆಯ ರೂಪುರೇಷೆಗಳ ಬಗ್ಗೆ ಡಿಸೆಂಬರ್ 7ರೊಳಗಾಗಿ ವರದಿ ನೀಡಬೇಕಿದೆ. ಅಲ್ಲದೇ ಮಾರ್ಚ್ 26ರೊಳಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ರೂಪುರೇಷೆಗಳ ಸಮಗ್ರ ವರದಿ ಸಲ್ಲಿಸಬೇಕಿದ್ದು, ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ಸೂಕ್ತ ಸಹಕಾರ ನೀಡುವಂತೆ ಕೋರಿದರು.

ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಲೀಡ್ ಬ್ಯಾಂಕ್, ಪ್ರವಾಸೋದ್ಯಮ, ಶಿಕ್ಷಣ, ಪಂಚಾಯತ್ ರಾಜ್, ಎನ್‌ಆರ್‌ಎಲ್‌ಎಂ, ಆಹಾರ, ಪಶುಸಂಗೋಪನಾ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮತ್ತು ಯೋಜನೆಗಳ ರೂಪುರೇಷೆ ಸಿದ್ಧಪಡಿಸುವ ಕುರಿತಂತೆ ತಮ್ಮ ಅಭಿಪ್ರಾಯ ಹಾಗೂ ವರದಿಗಳನ್ನು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿಗಳಾದ ಅಲೋಕ ಕುಮಾರ್ ಹಾಗೂ ತನುಶ್ರೀ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಎ.ಎ. ಕಂಬಾಳಿಮಠ, ಎಂ.ವಿ. ಚಳಗೇರಿ, ಚೇತನಾ ಪಾಟೀಲ, ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಎಸ್.ಎಸ್. ನೀಲಗುಂದ, ಆರ್.ಎಸ್. ಬುರಡಿ, ಜಿ.ಎಂ. ಮುಂದಿನಮನಿ, ಕೊಟ್ರೇಶ ವಿಭೂತಿ, ಪದ್ಮಾವತಿ ಜಿ, ಡಾ. ಶರಣು ಗೋಗೇರಿ, ರುದ್ರಣ್ಣಗೌಡ ಜಿ.ಜೆ, ಡಾ. ಎಚ್.ಬಿ. ಹುಲಗಣ್ಣವರ, ಬಸವರಾಜ ಮಲ್ಲೂರ, ಡಾ. ಬಸವರಾಜ ಬಳ್ಳಾರಿ, ಡಾ. ನಂದಾ ಹಣಬರಟ್ಟಿ, ಬಸನಗೌಡ ಕೊಟೂರ, ರಾಜಾರಾಮ ಪವಾರ, ಎಂ.ಎಂ ತುಂಬರಮಟ್ಟಿ, ಅಮಿತ ಬಿದರಿ, ಶ್ರೀಶೈಲ ಸೊಮನಕಟ್ಟಿ, ಶಿವಕುಮಾರ ಕುರಿಯುವರ, ಸಿದ್ಧಲಿಂಗ ಮಸನಾಯಕ ಮುಂತಾದವರು ಹಾಜರಿದ್ದರು.

ಗ್ರಾಮೀಣ ರಸ್ತೆ ಜಾಲ ಬಲಪಡಿಸುವುದು, ವಿಶ್ವಾಸಾರ್ಹ ವಿದ್ಯುತ್ ಪೂರೈಕೆ, ಡಿಜಿಟಲ್ ಸಂಪರ್ಕ ವಿಸ್ತರಣೆ, ಶೌಚಾಲಯ ಮತ್ತು ಸ್ವಚ್ಛತಾ ಸೌಲಭ್ಯಗಳ ಸುಧಾರಣೆ ಮುಂತಾದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಜಾರಿಗೆ ತರಲಾಗುತ್ತದೆ. ಮೂಲಸೌಕರ್ಯ ಬಲವಾದಷ್ಟೂ ಹೂಡಿಕೆ, ಉದ್ಯೋಗ ಹಾಗೂ ಸೇವಾ ಚಟುವಟಿಕೆಗಳಿಗೆ ಅವಕಾಶ ಹೆಚ್ಚುವುದನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ. ಇದರಿಂದ ಗ್ರಾಮೀಣ ಮಹಿಳಾ ಮತ್ತು ಯುವ ಉದ್ಯಮಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಾಣುವ ನಿರೀಕ್ಷೆಯಿದ್ದು, ಇಲಾಖಾಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಲು ಡಿಸಿ ಸಿ.ಎನ್. ಶ್ರೀಧರ್ ಸೂಚಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!