ಮೈಸೂರು:- ಜಿಲ್ಲೆಯ ಹುಣಸೂರು ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆಯವರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
Advertisement
ರೈತ ಮುನಿಕುಮಾರ್ ಅವರ ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ರಾಜು ಎಂಬುವರಿಗೆ ಹೆಬ್ಬಾವು ಕಾಣಿಸಿಕೊಂಡಿತು. ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸುಮಾರು 7 ಅಡಿ ಉದ್ದ, 20 ಕೆಜಿ ತೂಕದ ಹೆಣ್ಣು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ರವಾನಿಸಿದರು. ಸುಮಾರು 8–10 ವರ್ಷದ ಈ ಹೆಬ್ಬಾವು ಸಂಪೂರ್ಣ ಆರೋಗ್ಯವಾಗಿದ್ದು, ಮೊಲ, ಕುರಿ, ಮೇಕೆ ಮೊದಲಾದ ಪ್ರಾಣಿಗಳನ್ನು ಸುಲಭವಾಗಿ ನುಂಗಬಹುದಾದ ಗಾತ್ರದ್ದಾಗಿದೆ.


