ವಿಜಯಸಾಕ್ಷಿ ಸುದ್ದಿ, ಗದಗ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಗದಗ ಜಿಲ್ಲಾ ಘಟಕದ ವತಿಯಿಂದ `ಸಬಲ ಯುವಕರು-ಶುದ್ಧ ಮನಸ್ಸು, ಸುರಕ್ಷಿತ ಭವಿಷ್ಯ’ ಎಂಬ ವಿಷಯಾಧಾರಿತ ಯುವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಮಹಾಂತೇಶ ಸಜ್ಜನ್ ಸೈಬರ್ ವಂಚನೆಯ ವಿವಿಧ ವಿಧಾನಗಳನ್ನು ವಿವರಿಸಿ, ಅದರಿಂದ ತಪ್ಪಿಸಿಕೊಳ್ಳುವ ಕುರಿತು ಮಹತ್ವದ ಮಾಹಿತಿ ನೀಡಿದರು.
ನಂತರ ಡಾ. ಮುಹಮ್ಮದ್ ನಿಜಾಮುದ್ದೀನ್ ಅತ್ತಾರ ಯುವಕರಲ್ಲಿ ವ್ಯಸನಗಳಿಂದ ಉಂಟಾಗುವ ದೈಹಿಕ ಹಾಗೂ ಮಾನಸಿಕ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ಮುಖ್ಯ ಅತಿಥಿಗಳಾದ ಮುಹಮ್ಮದ್ ಕುಂಞ ಮಾತನಾಡಿ, ನಾವು ಒಂದೇ ತಂದೆ-ತಾಯಿಯ ಮಕ್ಕಳು, ಪರಸ್ಪರ ಸಹೋದರರು. ದ್ವೇಷ-ಹಗೆತನವನ್ನು ಬಿಟ್ಟು ದೇಶ ನಿರ್ಮಾಣ ಮತ್ತು ಸಮಾಜ ಸುಧಾರಣೆಯ ಕಾರ್ಯದಲ್ಲಿ ಯುವಕರು ತಮ್ಮ ಯೌವ್ವನವನ್ನು ತೊಡಗಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ರಚಿಸಲಾಗಿರುವ `ಡಿಜಿಟಲ್ ಸ್ವಾತಂತ್ರ್ಯ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮುನ್ನಾ ಕಲ್ಮನಿ ಸಂವಿಧಾನ ಪೀಠಿಕೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಡಾ. ನಸೀಮ್ ಅಹ್ಮದ್, ಜಮಾಅತೆ ಉಲೆಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಇನಾಯತುಲ್ಲಾ ಪೀರಜಾದೆ, ಮುಹಮ್ಮದ್ ಇಸ್ಮಾಯಿಲ್, ಇಲಿಯಾಸ್ ನಾಲ್ಬಂದ್, ಮುಹಮ್ಮದ್ ಯೂಸುಫ್ ಮುಲ್ಲಾ ಉಪಸ್ಥಿತರಿದ್ದರು.
ಜುನೇದ್ ಉಮಚಗಿ, ಕೆ.ಆಯ್. ಶೇಖ್, ರಜಾಕ್ ಡಂಕೇದ, ಇಮಾಮ್ಸಾಬ್ ಮೊರಬದ, ಉಸ್ಮಾನ್ ಮಾಳೆಕೊಪ್ಪ, ರಿಯಾಜ್ ಶೇಖ್, ಅಬ್ದುಲ್ ಹಫೀಜ್ ಉಮಚಗಿ, ಮುಹಮ್ಮದ್ ಇಸ್ಮಾಯಿಲ್, ಅಕ್ಬರ್ಅಲಿ ಅತ್ತಾರ, ಜಾವೀದ್ ಉಮಚಗಿ, ಮೆಹಬೂಬಅಲಿ, ಫಯಿಮ್, ಅಲ್ತಾಫ್, ಸಮೀರ್, ಫುರ್ಕಾನ್, ಆದಿಲ್, ಕಾಸಿಮ್ ದರಗದ, ಮುನ್ನಾ ಶೇಖ ಮುಂತಾದವರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಯುವಕರಲ್ಲಿ ಉತ್ತಮ ನಾಯಕತ್ವ ವಿಕಸನವಾಗಲು ವ್ಯಕ್ತಿತ್ವ ಮತ್ತು ಜೀವನ ಶೈಲಿಯಲ್ಲಿ ಮೌಲ್ಯಾಧಾರಿತ ಬದಲಾವಣೆಯ ಅಗತ್ಯತೆಯನ್ನು ಒತ್ತಿಹೇಳಿ, ಮೌಲ್ಯಾಧಾರಿತ ನಾಯಕತ್ವವೇ ಸಮಾಜದಲ್ಲಿ ನಿಜವಾದ ಬದಲಾವಣೆಗೆ ಕಾರಣವಾಗುತ್ತದೆ ಎಂದು ನುಡಿದರು.


