ವಿಜಯಸಾಕ್ಷಿ ಸುದ್ದಿ, ಗದಗ: ಗದಗ ವಿವೇಕಾನಂದ ರಸ್ತೆಯ ಮಸಾರಿ ಭಾಗದ ನಿವಾಸಿಗಳೂ, ಆರ್ಯವೈಶ್ಯ ಸಮಾಜದ ಹಿರಿಯರೂ ಆದ ಮನೋರಂಜಿತಾ ಗೋಪಾಲಕೃಷ್ಣ ಹೇಮಾದ್ರಿ (82) ಅವರು ರವಿವಾರ ಬೆಳಿಗ್ಗೆ ನಿಧನರಾದರು.
ಪತಿ, ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಬಿಟ್ಟು ಅಗಲಿರುವ ಮೃತರ ಅಂತ್ಯಕ್ರಿಯೆಯು ಸಂಜೆ ಜರುಗಿತು. ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮೃತರ ನೇತ್ರದಾನ ನೀಡುವಂತೆ ಪ್ರೇರಣೆ ನೀಡಿದರು. ಕುಟುಂಬದವರ ಒಪ್ಪಿಗೆಯಂತೆ ಹುಬ್ಬಳ್ಳಿಯ ಕಣ್ಣಿನ ಆಸ್ಪತ್ರೆಯ ತಜ್ಞರ ತಂಡ ನೇತ್ರದಾನದ ಪ್ರಕ್ರಿಯೆ ಕೈಗೊಂಡಿತು.
ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರು, ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೆರಣೇಕರ್, ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಖಜಾಂಚಿ ರೇಣುಕಪ್ರಸಾದ ಹಿರೇಮಠ, ಝೋನ್ ಚೇರ್‌ಪರ್ಸನ್ ರಮೇಶ ಶಿಗ್ಲಿ ಮುಂತಾದವರಿದ್ದರು.



